ಬುಧವಾರ, ಜನವರಿ 27, 2021
27 °C

ಮಣಪ್ಪುರಂ ಫೈನಾನ್ಸ್‌ ಕಚೇರಿ ಕಳವಿಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್ ಮಧ್ಯೆಯೇ ದುಷ್ಕರ್ಮಿಗಳು ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಳ್ಳತನ ಯತ್ನ ಸಂಬಂಧ ಮಣಪ್ಪುರಂ ಫೈನಾನ್ಸ್ ಶಾಖೆ ವ್ಯವಸ್ಥಾಪಕ ಕೃಷ್ಣ ಎಂಬುವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ನಂದಿನಿ ಲೇಔಟ್‌ನ ಪರಿಮಳ ನಗರದಲ್ಲಿ ಫೈನಾನ್ಸ್ ಕಚೇರಿ ಇದೆ. ಇದೇ 30ರ ತಡರಾತ್ರಿ ಕಚೇರಿಯ ಶೆಟರ್‌ ಬೀಗ ಮುರಿದು ಕಳ್ಳರು ಒಳನುಗ್ಗಿದ್ದರು. ಹಣ ಹಾಗೂ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದರು.’

‘ಕಚೇರಿಯಲ್ಲಿ ಅಳವಡಿಸಿದ್ದ ಅಲಾರಾಂ ಶಬ್ದ ಮಾಡಲಾರಂಭಿಸಿತ್ತು. ಕಳ್ಳರು ಅಲ್ಲಿಂದ ಓಡಿಹೋಗಿದ್ದರು. ಕಚೇರಿಯ ವಲಯ ವ್ಯವಸ್ಥಾಪಕರ ಮೊಬೈಲ್‌ಗೆ ತುರ್ತು ಸಂದೇಶ ಹೋಗಿತ್ತು. ನಸುಕಿನ 5ರ ಸುಮಾರಿಗೆ ಕೃಷ್ಣ ಅವರು ಕಚೇರಿಗೆ ಹೋಗಿ ನೋಡಿದಾಗ ಶೆಟರ್‌ ತೆರೆದಿದ್ದು ಕಂಡಿತ್ತು. ಪರಿಶೀಲನೆ ನಡೆಸಿದಾಗ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲವೆಂಬುದು ತಿಳಿಯಿತು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.