ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಮ್ಯಾಂಡಸ್’ ಚಂಡಮಾರುತದ ಮಳೆ– ಚಳಿಯ ತೀವ್ರತೆ ರಾಜಧಾನಿ ಬೆಂಗಳೂರಿಗೂ ತಟ್ಟಿದೆ. ನಗರದಲ್ಲಿ ಶನಿವಾರ ದಿನವಿಡೀ ಮಳೆ ಸುರಿಯಿತು. ಕೆಲವು ಬಡಾವಣೆಗಳಲ್ಲಿ ಮಳೆ ಬಿರುಸಾಗಿ ಸುರಿದರೆ, ಕೆಲವು ಕಡೆ ಜಿಟಿಜಿಟಿಯಾಗಿ ಬಂದಿತು.

ಭಾನುವಾರ ಸಹ ನಗರದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಕೊರೆಯುವ ಚಳಿಯಿಂದ ವೃದ್ಧರಿಗೆ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ದಿನವಿಡೀ ಸೂರ್ಯನ ದರ್ಶನವಾಗಲಿಲ್ಲ. ಅಕಾಲಿಕ ಮಳೆಯು ಮಳೆಗಾಲ ನೆನಪಿಸಿತು.

ಮಲ್ಲೇಶ್ವರ, ಬ್ಯಾಟರಾಯನಪುರ, ಪೀಣ್ಯಕೈಗಾರಿಕಾ ಪ್ರದೇಶ, ಜಾಲಹಳ್ಳಿ, ಯಲಹಂಕ, ಕೆಂಗೇರಿ, ಕೆಂಗೇರಿ ಉಪನಗರ, ರಾಜಾಜಿನಗರ, ಹೆಬ್ಬಾಳ, ಸದಾಶಿವನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಟಿ.ದಾಸರಹಳ್ಳಿ, ಸುಂಕದಕಟ್ಟೆ, ಯಶವಂತಪುರ, ಹೆಗ್ಗನಹಳ್ಳಿ, ಹೆಬ್ಬಾಳ, ರಾಜಗೋಪಾಲನಗರ, ಶ್ರೀರಾಮಪುರ, ಸುಬ್ರಹ್ಮಣ್ಯ ನಗರ, ಚಂದ್ರಲೇಔಟ್, ಕಲಾಸಿಪಾಳ್ಯ, ಚಾಮರಾಜಪೇಟೆ, ಉಪ್ಪಾರಪೇಟೆ, ಜೆ.ಜೆ.ನಗರ, ಮಾಗಡಿ ರಸ್ತೆ, ವಿಜಯನಗರ, ಕೋರಮಂಗಲದಲ್ಲಿ ಇಡೀ ದಿನ ಮಳೆಯಾಗಿದೆ. ಮಳೆ ಹಾಗೂ ಚಳಿಯಿಂದ ನಗರದ ಜನರು ತೊಂದರೆ ಅನುಭವಿಸಿದರು. ವಾರಾಂತ್ಯದಲ್ಲಿ ಖರೀದಿಗೆ ಮನೆಯಿಂದ ಹೊರಬಂದವರು ಕೊಡೆಯ ರಕ್ಷಣೆ ಪಡೆದು ಸಾಗಿದರು.

ಚಳಿಯಿಂದ ರಕ್ಷಣೆ ಪಡೆಯಲು ಜನರು ಬಿಸಿ ಜೋಳ, ಬಿಸಿಯಾದ ಕಾಫಿ ಮೊರೆಹೋದರು. ಕೆಲಸ
ಮುಗಿಸಿ ದ್ವಿಚಕ್ರ ವಾಹನಗಳಲ್ಲಿ ಮನೆಗೆ ತೆರಳುವವರು ಪರದಾಡಿದರು.

ಅಕಾಲಿಕ ಮಳೆಯಿಂದ ಬೀದಿಬದಿಯ ವ್ಯಾಪಾರಿಗಳು ನಷ್ಟಕ್ಕೆ ಒಳಗಾದರು. ನಿತ್ಯ ಮೆಜೆಸ್ಟಿಕ್ ಸುತ್ತಮುತ್ತ, ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆಯ ರಸ್ತೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರು ತೊಂದರೆ ಅನುಭವಿಸಿದರು. ಅವರಿಗೆ ವ್ಯಾಪಾರ ನಡೆಸಲು ಸಾಧ್ಯವಾಗಲಿಲ್ಲ.

ನಗರದಲ್ಲಿ ತಾಪಮಾನ ಕುಸಿದಿದ್ದು ಮೈಕೊರೆಯುವ ಚಳಿಯಿತ್ತು. ಶನಿವಾರ ಕನಿಷ್ಠ 19 ಹಾಗೂ ಗರಿಷ್ಠ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ಡಿ.11ರಂದು ಕನಿಷ್ಠ 19, ಗರಿಷ್ಠ 25, ಡಿ.12ರಂದು ಕನಿಷ್ಠ 19 ಹಾಗೂ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ಸ್ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.