ಗುರುವಾರ , ಏಪ್ರಿಲ್ 2, 2020
19 °C

ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್ ಪ್ರತಿಧ್ವನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟಿಸುತ್ತಿದ್ದವರ ಮೇಲೆ ಗೋಲಿಬಾರ್ ನಡೆಸಿದ ಕ್ರಮವನ್ನು ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದರು.

‘ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳೇ ನಿಂತು ಗೋಲಿಬಾರ್ ಮಾಡಿಸಿದ್ದಾರೆ. 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಹೇರಿದ್ದಾರೆ. ಸತ್ತವರಿಗೆ ಪರಿಹಾರ ಕೊಡಲು ಆಗಲ್ಲ ಎಂದರು’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುವ ಶಾಲೆಯಲ್ಲಿ ಬಾಬ್ರಿ ಮಸೀದಿ ಕೆಡವುವ ನಾಟಕ ಪ್ರದರ್ಶನ ನಡೆದಿತ್ತು. ಅದರೆ ಯಾರ ಮೇಲೆಯೂ ಪ್ರಕರಣ ದಾಖಲಾಗಲಿಲ್ಲ. ಗೋಲಿಬಾರ್ ಮಾಡಿದರೆ ಮುಸ್ಲಿಮರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಮತ್ತೊಬ್ಬರು ಹೇಳಿದರು. ಆಗಲೂ ಪ್ರಕರಣ ದಾಖಲಾಗಲಿಲ್ಲ. ಬೀದರ್ ಶಾಲೆಯಲ್ಲಿ ಮಾತ್ರ ಶಿಕ್ಷಕಿಯನ್ನು ಬಂಧಿಸಿದರು. ಇದು ಅರಾಜಕತೆ ಅಲ್ಲದೆ ಇನ್ನೇನು’ ಎಂದು ಪ್ರಶ್ನಿಸಿದರು.

‘ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ತಪ್ಪಿತಸ್ಥ ಪೊಲೀಸರನ್ನು ಜೈಲಿಗೆ ಹಾಕಬೇಕು. ಇದರ ಜವಾಬ್ದಾರಿ ಸರ್ಕಾರ ಹೊರಬೇಕು’ ಎಂದು ಆಗ್ರಹಿಸಿದರು.

ಅಮಾಯಕರ ವಿರುದ್ಧ ಕ್ರಮ: ಕುಮಾರಸ್ವಾಮಿ ಟೀಕೆ

ರಾಜ್ಯದ ವಿವಿಧೆಡೆ ನಡೆದ ಪ್ರತಿಭಟನೆಗಳನ್ನು ನಿರ್ವಹಿಸುವಲ್ಲಿ ಸರ್ಕಾರ ಎಡವಿರುವ ಮಾಹಿತಿಯನ್ನು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಬಿಚ್ಚಿಟ್ಟರು.

‘ಕಲಬುರ್ಗಿಯಲ್ಲಿ ಪ್ರತಿಭಟನೆ ಆದಾಗ ಗಲಾಟೆ ಆಗಲಿಲ್ಲ. ಆದರೂ ಪತ್ರಿಭಟನೆ ಮಾಡಿದವರನ್ನು ಠಾಣೆಯಲ್ಲಿ ಕೂರಿಸಿಕೊಂಡರು. ವಿಡಿಯೊ ಸಂವಾದದ ಮೂಲಕ ಗೃಹ ಸಚಿವರ ಗಮನಕ್ಕೆ ತರಲಾಯಿತು. ರಾತ್ರಿ 8.30ರವರೆಗೂ ವಿಡಿಯೊ ಸಂವಾದ ನಡೆಯಿತು. ಪ್ರತಿಭಟನಾ ರ್‍ಯಾಲಿ ಸಂದರ್ಭ ಗೋಲಿಬಾರ್ ಆಗಲು ಕಾರಣವೇನು? ಬಲವಂತವಾಗಿ ವಾಹನಕ್ಕೆ ಪೊಲೀಸರು ತುಂಬಿದ್ದು ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು