ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಮಾನ್ಯಳಿಗೆ 'ಕನ್ನಡದ ಕಿರಿಯ ಲೇಖಕಿ' ಬಿರುದು

Last Updated 27 ಆಗಸ್ಟ್ 2020, 3:38 IST
ಅಕ್ಷರ ಗಾತ್ರ

ಬೆಂಗಳೂರು: ಬಿಟಿಎಂ ಬಡಾವಣೆಯ ವಿಬ್‌ಗಯಾರ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಮಾನ್ಯ ಬರೆದಿರುವ 'ನೀರಿನ ಪುಟಾಣಿ ಸಂರಕ್ಷಕರು' ಮಕ್ಕಳ ಕಾದಂಬರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ 'ಕನ್ನಡದಲ್ಲಿ ಪುಸ್ತಕ ಬರೆದಿರುವ ಕಿರಿಯ ಲೇಖಕಿ' ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.

ಚಿತ್ರಾ ಮತ್ತು ಹರ್ಷ ದಂಪತಿಯ ಮಗಳಾದ ಮಾನ್ಯ, ಹತ್ತನೇ ವಯಸ್ಸಿಗೆ ಕನ್ನಡದ ಕಿರಿಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

'ಕನ್ನಡದಲ್ಲಿ ಪುಸ್ತಕ ಬರೆಯಲು ನನ್ನ ಅಜ್ಜಿಯೇ ನನಗೆ ಸ್ಫೂರ್ತಿ. ಈ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ 'ದಿ ವಾಟರ್ ಹೀರೋಸ್' ಹೆಸರಿನಲ್ಲಿ ರಚಿಸಲಾಗಿದೆ. ಮಾ.22ರ ವಿಶ್ವ ಜಲ ದಿನದಂದು ಪುಸ್ತಕ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಕಾರಣಕ್ಕೆ ಆನ್‍ಲೈನ್‍ನಲ್ಲೇ ಬಿಡುಗಡೆ ಮಾಡಿದೆವು. ಪ್ರಸ್ತುತ ಕಾಡುತ್ತಿರುವ ನೀರಿನ ಕೊರತೆ ಹಾಗೂ ಅದರ ಸಂರಕ್ಷಣೆಯ ತೀವ್ರತೆಯ ಮೇಲೆ ಪುಸ್ತಕ ಬೆಳಕು ಚೆಲ್ಲುತ್ತದೆ' ಎಂದು ಮಾನ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT