ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಸೋಗಿನಲ್ಲಿ ₹ 25 ಲಕ್ಷ ಪಡೆದು ವಂಚನೆ

Last Updated 5 ನವೆಂಬರ್ 2020, 19:17 IST
ಅಕ್ಷರ ಗಾತ್ರ

ಬೆಂಗಳೂರು: ವೈವಾಹಿಕ ಜಾಲತಾಣಗಳಲ್ಲಿ ಪರಿಚಯವಾಗಿ ಮದುವೆ ಸೋಗಿನಲ್ಲಿ ₹ 25.25 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿವೆ.

‘ವಂಚಗೀಡಾಗಿರುವ 31 ವರ್ಷದ ಯುವತಿ ಹಾಗೂ 37 ವರ್ಷದ ಯುವಕ ದೂರು ನೀಡಿದ್ದಾರೆ. ಆರೋಪಿಗಳಾದ ಸ್ವೈನ್ ರಾಜ್ ಕಿಶೋರ್, ಶಿಲ್ಪಾ ಶರ್ಮಾ ಹಾಗೂ ಸಹನಾ ಗುಪ್ತಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವೈಟ್‌ಫೀಲ್ಡ್ ನಿವಾಸಿಯಾದ 31 ವರ್ಷದ ಯುವತಿ, ಖಾಸಗಿ ಕಂಪನಿ ಉದ್ಯೋಗಿ. ಮದುವೆಗೆ ವರನನ್ನು ಹುಡುಕುತ್ತಿದ್ದ ಅವರು ವೈವಾಹಿಕ ಜಾಲತಾಣವೊಂದರಲ್ಲಿ ಖಾತೆ ತೆರೆದು ಸ್ವ–ವಿವರ ಅಪ್‌ಲೋಡ್‌ ಮಾಡಿದ್ದರು.'

'ಸ್ವೈನ್ ರಾಜ್ ಕಿಶೋರ್ ಹೆಸರಿನಲ್ಲಿ ಪರಿಚಯವಾಗಿದ್ದ ಆರೋಪಿ, ತಾನೊಬ್ಬ ಸಿವಿಲ್ ಎಂಜಿನಿಯರ್ ಎಂದಿದ್ದ. ನಂತರ, ಮೊಬೈಲ್ ನಂಬರ್ ಪಡೆದುಕೊಂಡು ಮಾತನಾಡಲಾರಂಭಿಸಿದ್ದ. ಕೆಲಸದ ನಿಮಿತ್ತ ಮಲೇಷ್ಯಾಗೆ ಹೊರಟಿರುವುದಾಗಿ ಹೇಳಿದ್ದ ಆರೋಪಿ, ಕಟ್ಟಡ ನಿರ್ಮಾಣದ ವಸ್ತುಗಳನ್ನು ಖರೀದಿಸಲು ಹಣ ಕಡಿಮೆ ಆಗಿರುವುದಾಗಿ ಹೇಳಿ ₹ 24.50 ಲಕ್ಷ ಪಡೆದುಕೊಂಡಿದ್ದ. ಆ ನಂತರ, ಆರೋಪಿ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿದರು.

ವೈದ್ಯೆ ಸೋಗಿನಲ್ಲಿ ವಂಚನೆ: ‘ಕೆ.ಆರ್. ಪುರ ನಿವಾಸಿಯಾದ 37 ವರ್ಷದ ವ್ಯಕ್ತಿಗೆ ಜಾಲತಾಣದಲ್ಲಿ ಸೆ. 29ರಂದು ಶಿಲ್ಪಾ ಶರ್ಮಾ ಎಂಬುವರು ಪರಿಚಯವಾಗಿದ್ದರು. ಇಬ್ಬರು ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡು ಮಾತನಾಡಲಾರಂಭಿಸಿದ್ದರು' ಎಂದು ಪೊಲೀಸರು ಹೇಳಿದರು.

‘ಲಂಡನ್‌ನಲ್ಲಿ ವೈದ್ಯೆಯಾಗಿರುವುದಾಗಿ ಹೇಳಿದ್ದ ಶಿಲ್ಪಾ, ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿರುವುದಾಗಿ ಹೇಳಿದ್ದರು. ತನ್ನನ್ನು ನಿಲ್ದಾಣದ ಅಧಿಕಾರಿಗಳು ತಡೆದಿರುವುದಾಗಿ ಹೇಳಿ ಸಹನಾ ಎಂಬುವರಿಂದ ಕರೆ ಮಾಡಿದ್ದರು. ಅದನ್ನು ನಂಬಿದ್ದ ವ್ಯಕ್ತಿ, ₹ 75 ಸಾವಿರ ಜಮೆ ಮಾಡಿದ್ದರು. ಅದಾದ ನಂತರ ಯುವತಿ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT