ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ಸೈಟ್ವೊಂದರಲ್ಲಿ ಸಂಪರ್ಕಕ್ಕೆ ಸಿಕ್ಕಿದ್ದ ಯುವತಿಯೊಬ್ಬಳು, ಸಾಫ್ಟ್ವೇರ್ ಎಂಜಿನಿಯರ್ ಅನ್ನು ಮದುವೆ ಆಗುವುದಾಗಿ ನಂಬಿಸಿ ₹80 ಲಕ್ಷ ವಂಚಿಸಿದ್ದಾಳೆ.

ರಾಮಮೂರ್ತಿ ನಗರದಲ್ಲಿ ನೆಲಸಿರುವ 32 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ರಿಶಿ (ಹೆಸರು ಬದಲಾವಣೆ ಮಾಡಲಾಗಿದೆ) ಅವರು ನೀಡಿದ ದೂರು ಆಧರಿಸಿ ಪೂರ್ವ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318ರ (ವಂಚನೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೈಬರ್ ಪೊಲೀಸರು ಹೇಳಿದರು.

‘ವಿಶಾಖಪಟ್ಟಣದ ರೋಹಿಣಿ ವರ್ಮಾ ಎಂಬುದಾಗಿ ಪರಿಚಯಿಸಿಕೊಂಡಿದ್ದ ಯುವತಿ, ಇಂಗ್ಲೆಂಡ್ನ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸಾಫ್ಟ್ವೇರ್ ಎಂಜಿನಿಯರ್ ಬಳಿ ಹೇಳಿಕೊಂಡಿದ್ದಳು. ಆರು ತಿಂಗಳ ಒಳಗಾಗಿ ಭಾರತಕ್ಕೆ ಬರುತ್ತೇನೆ. ಆಗ ಮದುವೆಯ ಬಗ್ಗೆ ಚರ್ಚಿಸೋಣ ಎಂದು ನಂಬಿಸಿದ್ದಳು. ಅದಾದ ಮೇಲೆ ಇಬ್ಬರೂ ವಾಟ್ಸ್ಆ್ಯಪ್ನಲ್ಲಿ ಚರ್ಚೆ ನಡೆಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ಭಾರತ ಹಾಗೂ ಇಂಗ್ಲೆಂಡ್ನ ಎರಡು ಪ್ರತ್ಯೇಕ ಸಂಖ್ಯೆಗಳಿಂದ ವಂಚಕಿ ಕರೆ ಮಾಡುತ್ತಿದ್ದಳು. ತಾನು ಕೆಲಸ ಮಾಡುತ್ತಿರುವ ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ಆಸೆ ತೋರಿಸಿ ನಂಬಿಕೆ ಬರುವಂತೆ ಮಾತುಕತೆ ಮಾಡುತ್ತಿದ್ದಳು. ಲಾಭದ ಹಣದಿಂದ ಮದುವೆಯಾದ ಮೇಲೆ ಇಬ್ಬರೂ ಉತ್ತಮ ಬದುಕು ಕಟ್ಟಿಕೊಳ್ಳೊಣ ಎಂದು ಹೇಳಿದ್ದಳು. ಆಕೆಯ ಮಾತು ನಂಬಿದ್ದ ಸಾಫ್ಟ್ವೇರ್ ಎಂಜಿನಿಯರ್, 2025ರ ಫೆಬ್ರುವರಿಯಿಂದ ಹಂತ ಹಂತವಾಗಿ ₹80 ಲಕ್ಷ ಹೂಡಿಕೆ ಮಾಡಿದ್ದರು. ಯುವತಿ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ರಿಶಿ ಹಣ ವರ್ಗಾವಣೆ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಈ ವೇಳೆ ಮತ್ತೊಬ್ಬ ವಂಚಕನ ಪರಿಚಯವಾಗಿ ಹೂಡಿಕೆ ಮಾಡಿದ್ದ ಹಣಕ್ಕೆ ಹೆಚ್ಚಿನ ಲಾಭ ಬಂದಂತೆ ವೆಬ್ಸೈಟ್ನಲ್ಲಿ ತೋರಿಸುತ್ತಿದ್ದ. ಕೆಲವು ದಿನಗಳ ಬಳಿಕ ರಿಶಿ ಅವರು ಲಾಭದ ಹಣವನ್ನು ತೆಗೆದುಕೊಳ್ಳಲು ಮುಂದಾಗಿದ್ದರು. ತೆರಿಗೆ ಹಾಗೂ ಶುಲ್ಕ ಹಣವನ್ನು ಪಾವತಿಸುವಂತೆ ಸೂಚಿಸಿದ್ದ. ಆಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿತ್ತು’ ಎಂದು ಸೈಬರ್ ಪೊಲೀಸರು ತಿಳಿಸಿದರು.

‘ಮಾರ್ಚ್ ಮೊದಲ ವಾರದಿಂದ ಜೂನ್ 18ರ ವರೆಗೆ ದೂರುದಾರರು 12 ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಜೂನ್ 19ರ ಬಳಿಕ ಯುವತಿ ಹಾಗೂ ಮತ್ತೊಬ್ಬ ವಂಚಕ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಜೂನ್ 23ರಂದು ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಸಾಫ್ಟ್ವೇರ್ ಎಂಜಿನಿಯರ್ ಹಣ ಹಾಕುತ್ತಿದ್ದಂತೆಯೇ ವಂಚಕರು ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.