ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಯ ಮೊಬೈಲ್‌ಗೆ ಔಷಧ ಮಾಹಿತಿ

‘ಇ– ಪ್ರಿಸ್ಕ್ರಿಪ್ಷನ್ ಸಾಫ್ಟ್‌ವೇರ್’ ಅಭಿವೃದ್ಧಿಪಡಿಸಿದ ನಿಮ್ಹಾನ್ಸ್‌
Last Updated 14 ಸೆಪ್ಟೆಂಬರ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಚಿಕಿತ್ಸೆ ಪಡೆದ ರೋಗಿಗಳ ಮೊಬೈಲ್‌ ಫೋನ್‌ಗೆ ಔಷಧಗಳ ಮಾಹಿತಿ ನೇರವಾಗಿ ಕಳುಹಿಸುವ ತಂತ್ರಾಂಶವನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಅಭಿವೃದ್ಧಿಪಡಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್, ‘ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ) ಸಹಯೋಗದೊಂದಿಗೆ ಇ-ಪ್ರಿಸ್ಕ್ರಿಪ್ಷನ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಚಿಕಿತ್ಸೆ ಪಡೆದ ರೋಗಿಗಳಿಗೆ ಬೇಕಾದ ಔಷಧಗಳ ಹೆಸರುಗಳನ್ನು ಅವರ ಮೊಬೈಲ್‍ಗೆ ಈ ತಂತ್ರಾಂಶದ ಸಹಾಯದಿಂದ ಕಳುಹಿಸಲಾಗುವುದು’ ಎಂದರು.

‘ದೇಶದಾದ್ಯಂತ ಗುಣಮಟ್ಟದ ಮಾನಸಿಕ ಆರೋಗ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಅಧಿಕಾರಿಗಳು,ಮನಃಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ದಾದಿಯರಿಗೆ ತರಬೇತಿ ನೀಡಲು ಡಿಜಿಟಲ್ ಅಕಾಡೆಮಿ (ಎನ್‍ಡಿಎ) ಸ್ಥಾಪಿಸಲಾಗಿದೆ. ಅದೇ ರೀತಿ,125 ಹಾಸಿಗೆಗಳ ಹೊಸ ಬ್ಲಾಕ್‍ನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದಾದಿಯರ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕ ಈ ಬ್ಲಾಕ್‌ನಲ್ಲೂ ಸೇವೆ ಆರಂಭವಾಗಲಿದೆ. ಈ ಕೇಂದ್ರದಲ್ಲಿ 15 ಹಾಸಿಗೆಗಳ ಸಾಮರ್ಥ್ಯದ ತೀವ್ರ ನಿಗಾ ಘಟಕ, ಎರಡು ಶಸ್ತ್ರಚಿಕಿತ್ಸಾ ಕೊಠಡಿಗಳು, ಸಾಮಾನ್ಯ ಕೊಠಡಿ ಮುಂತಾದ ಸೌಲಭ್ಯಗಳು ಇರಲಿವೆ’ ಎಂದು ತಿಳಿಸಿದರು.

‘ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಧೈರ್ಯ ತುಂಬಿ, ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಸಂಸ್ಥೆ ಸದ್ಯದಲ್ಲೇ ನಾಲ್ಕು ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಿದೆ. ಕೆಲ ವ್ಯಕ್ತಿಗಳಿಗೆ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದವರು ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಿಗೆ ತೆರಳಿ, ಅಲ್ಲಿನ ಸ್ಥಳೀಯರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ’ ಎಂದರು.

‘ರೋಗಿಗಳ ಕುಟುಂಬದ ಸದಸ್ಯರು ಮತ್ತು ಆರೈಕೆದಾರರಿಗೆ ಸಹಾಯ ಮಾಡುವ ಉದ್ದೇಶದಿಂದ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆ ಯಡಿ ಒಂದು ವರ್ಷದೊಳಗೆ 200 ಹಾಸಿಗೆಗಳ ಸಾಮರ್ಥ್ಯದ ವಸತಿನಿಲಯ ನಿರ್ಮಿಸಲಾಗುತ್ತದೆ’ ಎಂದರು.

ನಾಳೆ 24ನೇ ಘಟಿಕೋತ್ಸವ

‘ನಿಮ್ಹಾನ್ಸ್‌ನ 24ನೇ ಘಟಿಕೋತ್ಸವ ಸೋಮವಾರ (ಸೆ.16) ಮಧ್ಯಾಹ್ನ 3ಗಂಟೆಗೆ ನಡೆಯಲಿದೆ.

176 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತದೆ. 14 ಮಂದಿಗೆ ಪ್ರಶಂಸಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕಡಾ.ಬಿ.ಎನ್. ಗಂಗಾಧರ್ ಮಾಹಿತಿ ನೀಡಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು,ಕೇಂದ್ರಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆ ವಹಿಸಲಿದ್ದಾರೆ. ‘ಯೋಗ ಫಾರ್ ಡಿಪ್ರೆಶನ್’ ಎಂಬ ಕೃತಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT