ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ನಾಳೆ ಮೆಮು ವಿಶೇಷ ರೈಲುಗಳು ಭಾಗಶಃ ರದ್ದು

Published 22 ಮೇ 2024, 15:31 IST
Last Updated 22 ಮೇ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ವಾರ್ಷಿಕ ಕೇಬಲ್‌ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 23ರಂದು ಮೆಮು ವಿಶೇಷ ರೈಲುಗಳಲ್ಲಿ ಒಂದು ರದ್ದುಗೊಳ್ಳಲಿದ್ದು, 10 ರೈಲುಗಳು ಭಾಗಶಃ ರದ್ದಾಗಲಿವೆ. 

ವೈಟ್‌ಫೀಲ್ಡ್‌–ಕೆಎಎಸ್‌ ಬೆಂಗಳೂರು ಮೆಮು ವಿಶೇಷ ರೈಲು ರದ್ದಾಗಲಿದೆ. ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ವಿಶೇಷ ಮೆಮು ರೈಲು ಕೆಎಸ್ಆರ್ ಬೆಂಗಳೂರು-ವೈಟ್‌ಫೀಲ್ಡ್‌ ನಡುವೆ ಭಾಗಶಃ ರದ್ದುಗೊಳ್ಳಲಿದೆ.

ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ರೈಲು ಮತ್ತು ಬೆಂಗಳೂರು ಕಂಟೋನ್ಮೆಂಟ್‌-ಚಿಕ್ಕಬಳ್ಳಾಪುರ ಮೆಮು ರೈಲು ಯಲಹಂಕ-ಬೆಂಗಳೂರು ಕಂಟೋನ್ಮೆಂಟ್‌ ನಡುವೆ ಭಾಗಶಃ ರದ್ದಾಗಲಿದೆ.

ಬೆಂಗಳೂರು-ಮಾರಿಕುಪ್ಪಂ ಮತ್ತು ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ತಲಾ ಮೂರು ರೈಲು, ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು ಕೃಷ್ಣರಾಜಪುರಂ-ಕೆಎಸ್‌ಆರ್ ಬೆಂಗಳೂರು ನಡುವೆ ಸಂಚಾರ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT