ಬೆಂಗಳೂರು: ಸರಿಯಾಗಿ ಪ್ಯಾಕ್ ಮಾಡಿರದ ಯಾವುದೇ ರೀತಿಯ ಮಾಂಸವನ್ನು ಮೆಟ್ರೊ ರೈಲಿನಲ್ಲಿ ಒಯ್ಯುವಂತಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಮೆಟ್ರೊ ರೈಲಿನಲ್ಲಿ ಮೀನಿನ ಮಾಂಸ ಒಯ್ಯಲು ಭದ್ರತಾ ಸಿಬ್ಬಂದಿ ಬಿಡದಿರುವ ಬಗ್ಗೆ ಪ್ರಯಾಣಿಕ ಪವನ್‌ಕುಮಾರ್ ಎಂಬುವರು ಟ್ವಿಟರ್‌ನಲ್ಲಿ ನಿಗಮಕ್ಕೆ ದೂರು ನೀಡಿದ್ದರು.

‘ಮೆಟ್ರೊದಲ್ಲಿ ಯಾವುದೇ ಬಗೆಯ ಮಾಂಸ ಒಯ್ಯುವುದಕ್ಕೆ ನಿರ್ಬಂಧ ವಿಧಿಸಿ, 2018ರ ಅಕ್ಟೋಬರ್ 6ರಂದೇ ಆದೇಶ ಹೊರಡಿಸಲಾಗಿದೆ’ ಎಂದಿರುವ ನಿಗಮ, ತನ್ನ ಟ್ವಿಟರ್ ಖಾತೆಯಲ್ಲಿ ಆದೇಶದ ಪ್ರತಿಯನ್ನು ಲಗತ್ತಿಸಿದೆ. ಆದರೆ, ಮಾಂಸವನ್ನು ಸರಿಯಾಗಿ ಪ್ಯಾಕ್ ಮಾಡಿದ್ದರೆ, ಅದರಿಂದ ದುರ್ವಾಸನೆ ಬಾರದಂತಿದ್ದರೆ ಅಂತಹ ಮಾಂಸ ಒಯ್ಯಲು ಅಭ್ಯಂತರವಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.

‘ನಾನು ಮೀನಿನ ಮಾಂಸವನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿದ್ದೆ ಮತ್ತು ಅದರಿಂದ ಯಾವುದೇ ರೀತಿಯ ದುರ್ವಾಸನೆ ಬರುತ್ತಿರಲಿಲ್ಲ. ಸಹಪ್ರಯಾಣಿಕರಿಗೂ ಅದರಿಂದ ತೊಂದರೆಯಾಗುತ್ತಿರಲಿಲ್ಲ’ ಎಂದು ಪವನ್‌ಕುಮಾರ್ ಹೇಳಿದ್ದಾರೆ.

‘ಈ ವಿಷಯದಲ್ಲಿ ಭದ್ರತಾ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಿ’ ಎಂದೂ ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.