ಬೆಂಗಳೂರು: ನಮ್ಮ ಮೆಟ್ರೊದ ಮೂರನೇ ಹಂತದಲ್ಲಿ ಈ ಹಿಂದೆ ಉದ್ದೇಶಿಸಿದ್ದ 11,137 ಮರಗಳ ಬದಲು 6,868 ಮರಗಳಿಗೆ ಮಾತ್ರ ಧಕ್ಕೆಯಾಗಲಿದೆ ಎಂದು ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ (ಇಐಎ) ವರದಿಯಲ್ಲಿ ತಿಳಿಸಲಾಗಿದೆ.

6,868 ಮರಗಳಲ್ಲಿ ಶೇ 65ರಷ್ಟು ಮರಗಳನ್ನು ಮಾತ್ರ ಕಡಿಯಲಾಗುತ್ತದೆ. ಶೇ 15ರಷ್ಟನ್ನು ಸ್ಥಳಾಂತರಿಸಿದರೆ, ಶೇ 20ರಷ್ಟು ಮರಗಳ ಕೊಂಬೆ–ರೆಂಬೆಗಳನ್ನು ಕತ್ತರಿಸಲಾಗುತ್ತದೆ. ಪ್ರತಿಯೊಂದು ಮರದ ಕಡಿತಕ್ಕೆ ಪರ್ಯಾಯವಾಗಿ 10 ಸಸಿ ನೆಡಲಾಗುತ್ತದೆ. ಪ್ರತಿ ಸಸಿಗೆ ಸುಮಾರು ₹2,000 ವೆಚ್ಚ ಮಾಡಲಾಗುತ್ತದೆ. ಈ ಸಸಿಗಳ ಮೇಲೆ ಐದು ವರ್ಷ ನಿಗಾವಹಿಸಲಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ಭರವಸೆ ನೀಡಿದೆ.

ಜೆ.ಪಿ ನಗರದಿಂದ ಮೈಸೂರು ರಸ್ತೆ ನಡುವೆ ಮರಗಳ ಕಡಿತಕ್ಕೆ ಕಳೆದ ಸೆಪ್ಟೆಂಬರ್ನಲ್ಲಿ ಬಿಎಂಆರ್ಸಿಎಲ್ಗೆ ಅನುಮತಿ ದೊರೆತಿದೆ. ಈ ಭಾಗದಲ್ಲಿ 686 ಮರಗಳನ್ನು ಉಳಿಸಿಕೊಂಡು, 406 ಮರಗಳನ್ನು ಸ್ಥಳಾಂತರಿಸಲಾಗುತ್ತದೆ. 1,092 ಮರಗಳನ್ನು ಕಡಿಯಲಾಗುತ್ತದೆ. ಇದಲ್ಲದೆ ಒಟ್ಟಾರೆ ಯೋಜನೆ ಜಾರಿಗೆ ಅಡ್ಡಿಯಾಗುವ ಇನ್ನೂ ಹಲವು ಮರಗಳನ್ನು ಕಡಿಯಲು 2026ರ ಮಧ್ಯಭಾಗದಲ್ಲಿ ಅನುಮತಿ ದೊರೆಯಲಿದೆ ಎಂದು ಬಿಎಂಆರ್ಸಿಎಲ್ ನಿರೀಕ್ಷಿಸಿದೆ.

‘ಮರಗಳನ್ನು ಕಡಿಯುವ ಬಗ್ಗೆ ಬಿಎಂಆರ್ಸಿಎಲ್ನಲ್ಲಿ ಪಾರದರ್ಶಕವಾದ ಮಾಹಿತಿ ಇಲ್ಲ. ಒಂದು ಚಿಕ್ಕ ಪ್ರಾತ್ಯಕ್ಷಿಕೆಯನ್ನು ಮಾತ್ರ ತೋರಿಸಿದ್ದಾರೆ. ಸ್ಥಳೀಯರ ಸಲಹೆಗಳನ್ನು ಬಿಎಂಆರ್ಸಿಎಲ್ ನಿರ್ಲಕ್ಷಿಸಿದೆ’ ಎಂದು ಪರಿಸರ ಕಾರ್ಯಕರ್ತ ಟಿ. ದೇವರೆ ಅಭಿಪ್ರಾಯಪಟ್ಟರು.

ಜೆ.ಪಿ. ನಗರ–ಕೆಂಪಾಪುರ (ಕಾರಿಡಾರ್ 1– 32.2 ಕಿ.ಮೀ) ಮತ್ತು ಹೊಸಹಳ್ಳಿ–ಕಡಬಗೆರೆ (ಕಾರಿಡಾರ್–2– 12.45 ಕಿ.ಮೀ) ಕಾರಿಡಾರ್ಗಳಿರುವ 3ನೇ ಹಂತವು 44.65 ಕಿ.ಮೀ. ವ್ಯಾಪ್ತಿ ಹೊಂದಿದೆ. 2031ರ ಮೇ ಅಂತ್ಯಕ್ಕೆ ಮೂರನೇ ಹಂತ ಮುಗಿಯುವ ನಿರೀಕ್ಷೆ ಇದ್ದು, ಇದರೊಂದಿಗೆ ಬೆಂಗಳೂರು ಮೆಟ್ರೊ ಸಂಪರ್ಕ ಜಾಲ 222.2 ಕಿ.ಮೀಗೆ ವಿಸ್ತರಿಸಿದಂತಾಗುತ್ತದೆ.

2024ರ ಆಗಸ್ಟ್ನಲ್ಲೇ ಕೇಂದ್ರ ಸಚಿವ ಸಂಪುಟ 3ನೇ ಹಂತಕ್ಕೆ ಅನುಮತಿ ನೀಡಿದೆ. ಆದರೆ, 37.12 ಕಿ.ಮೀ ಉದ್ದದ ಡಬಲ್ ಡೆಕರ್ ಅನ್ನು ಈ ಜಾಲದಲ್ಲಿ ಸೇರ್ಪಡೆಗೊಳಿಸಿದ್ದರಿಂದ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಬಿಎಂಆರ್ಸಿಎಲ್ ಈ ತಿಂಗಳಾಂತ್ಯದಲ್ಲಿ ಟೆಂಡರ್ ಆಹ್ವಾನಿಸಲಿದ್ದು ಜೂನ್ನಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.

ಯೋಜನೆಗೆ ಅಡ್ಡಿಯಾಗುವ ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ಮರ ತಜ್ಞರ ಸಮಿತಿಯಿಂದ (ಟಿಇಸಿ) ಪರಿಶೀಲನೆ ನಡೆಯಲಿದ್ದು ಜಿಬಿಎ ಸೂಚಿಸುವ ಜಾಗಕ್ಕೆ ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ಅವರು ಮರಗಳನ್ನು ಐದು ವರ್ಷ ನಿರ್ವಹಣೆ ಮಾಡಲಿದ್ದಾರೆ. ಸ್ಥಳಾಂತರಿಸಿದ ಅಥವಾ ನೆಟ್ಟ ಸಸಿಗಳು ಸತ್ತುಹೋದರೆ, ವಾರ್ಷಿಕವಾಗಿ ಅವುಗಳನ್ನು ಪರಿಶೀಲಿಸಿ ಹೊಸ ಸಸಿಗಳನ್ನು ನೆಡಲಾಗುತ್ತದೆ ಎಂದು ಬಿಎಂಆರ್ಸಿಎಲ್ ಹೇಳಿದೆ.

3ನೇ ಹಂತದ ಕಾರಿಡಾರ್–1ರಲ್ಲಿ ಅರಣ್ಯೀಕರಣಕ್ಕಾಗಿ ₹7.18 ಕೋಟಿ ಹಾಗೂ ಕಾರಿಡಾರ್–2ರಲ್ಲಿ ₹169 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದಲ್ಲದೆ ಹೆಚ್ಚುವರಿಯಾಗಿ ₹25.96 ಕೋಟಿಯನ್ನು ನಿರ್ಮಾಣ ಸಂದರ್ಭದಲ್ಲಿ ಪರಿಸರ ನಿರ್ವಹಣೆಗಾಗಿ ವೆಚ್ಚ ಮಾಡಲಾಗುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.