ಬೆಂಗಳೂರು: ‘ನಮ್ಮ ಮೆಟ್ರೊ’ ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿಯೇ ಹಳೆಯ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಸುವ ಸೌಲಭ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು ಮಂಗಳವಾರದಿಂದ ಪುನರಾರಂಭಿಸಿದೆ.

ಪರಸ್ಪರ ಸಂಪರ್ಕ ಕಡಿಮೆಗೊಳಿಸುವ ಉದ್ದೇಶದಿಂದ ಕೌಂಟರ್‌ನಲ್ಲಿ ಸ್ಮಾರ್ಟ್‌ಕಾರ್ಡ್ ರಿಚಾರ್ಜ್‌ಗೆ ಅವಕಾಶ ನೀಡಿರಲಿಲ್ಲ. ಲಾಕ್‌ಡೌನ್ ನಂತರ ಮೆಟ್ರೊ ರೈಲು ಸೇವೆ ಪುನರಾರಂಭಗೊಂಡಾಗಿನಿಂದಲೂ ಇದೇ ವ್ಯವಸ್ಥೆ ಇತ್ತು. ಟೋಕನ್ ವಿತರಣೆ ಕೂಡ ಸ್ಥಗಿತಗೊಳಿಸಲಾಗಿತ್ತು.

‘ಸ್ಮಾರ್ಟ್‌ಕಾರ್ಡ್ ರಿಚಾರ್ಜ್ ನಿರ್ಬಂಧಗಳಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿತ್ತು. ಒಂದು ತಾಸು ಕಾಯಬೇಕಾಗಿದ್ದರಿಂದ ಬಹುತೇಕ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಈಗ ಹಳೆಯ ಸ್ಮಾರ್ಟ್‌ಕಾರ್ಡ್‌ಗಳನ್ನು ಕೌಂಟರ್‌ನಲ್ಲಿಯೇ ರಿಚಾರ್ಜ್ ಮಾಡಬಹುದು. ಆದರೆ, ನಗದು ಸ್ವೀಕರಿಸುವುದಿಲ್ಲ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ, ಪೇಟಿಎಂ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಶುಲ್ಕ ಪಾವತಿಸಿ ರಿಚಾರ್ಜ್ ಮಾಡಿಸಿಕೊಳ್ಳಬಹುದು’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ನಿಗಮದ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಪ್ರಯಾಣಕ್ಕೂ ಒಂದು ತಾಸು ಮುಂಚೆಯೇ ಸ್ಮಾರ್ಟ್‌ಕಾರ್ಡ್ ರಿಚಾರ್ಜ್ ಮಾಡಬೇಕಾಗಿತ್ತು. ಇಲ್ಲವೇ, ನಿಲ್ದಾಣದಲ್ಲಿ ಹೊಸ ಸ್ಮಾರ್ಟ್‌ಕಾರ್ಡ್ ಖರೀದಿಸಬೇಕಾಗಿತ್ತು. ಹಳೆಯ ಕಾರ್ಡ್‌ಗಳಿದ್ದರೂ, ಒಂದು ತಾಸು ಕಾಯಲು ಆಗದವರು ಅನಿವಾರ್ಯವಾಗಿ ₹50 ನೀಡಿ ಹೊಸ ಕಾರ್ಡ್ ತೆಗೆದುಕೊಳ್ಳಬೇಕಾಗಿತ್ತು.

‘ಡಿಜಿಟಲ್ ಪಾವತಿಗೆ ಅವಕಾಶ ನೀಡುವುದರ ಜೊತೆಗೆ ನೇರವಾಗಿ ನಗದು ನೀಡಿ ರಿಚಾರ್ಜ್ ಮಾಡಿಸಲು ಅವಕಾಶ ನೀಡಿದರೆ ಅನುಕೂಲವಾಗುತ್ತದೆ. ಬಹಳಷ್ಟು ಜನ ಒಂದೇ ಬಾರಿಗೆ ಹೆಚ್ಚು ಮೊತ್ತದ ರಿಚಾರ್ಜ್ ಮಾಡಿಸುವುದರಿಂದ ದಟ್ಟಣೆ ಅಷ್ಟಾಗಿ ಹೆಚ್ಚುವುದಿಲ್ಲ’ ಎಂದು ಪ್ರಯಾಣಿಕ ಜಿ. ರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.