ಬೆಂಗಳೂರು: ಗೊಟ್ಟಿಗೆರೆ–ನಾಗವಾರ ಮೆಟ್ರೊ ರೈಲು ಮಾರ್ಗದ ಮತ್ತೊಂದು ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಂಡಿದ್ದು, ಎಂ.ಜಿ.ರಸ್ತೆಯಿಂದ ಕಾಮಗಾರಿ ಆರಂಭಿಸಿದ್ದ ಸುರಂಗ ಕೊರೆಯುವ ಯಂತ್ರ(ಟಿಬಿಎಂ) ‘ಲಾವಿ’ ಬುಧವಾರ ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣದ(ವೆಲ್ಲಾರ ಜಂಕ್ಷನ್) ಬಳಿ ಹೊರಬಂದಿದೆ.
‘2022ರ ಮೇ 20ರಂದು ಹೊರಟಿದ್ದ ಟಿಬಿಎಂ, 1134 ಮೀಟರ್ ಸುರಂಗ ಕೊರೆದಿದೆ. ಇದರೊಂದಿಗೆ 14 ಕಿಲೋ ಮೀಟರ್ ಸುರಂಗ ಮಾರ್ಗದಲ್ಲಿ ಒಟ್ಟು ಶೇ 72ರಷ್ಟು ಪೂರ್ಣಗೊಂಡಂತಾಗಿದೆ’ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಒಟ್ಟಾರೆ 21,245 ಕಿಲೋ ಮೀಟರ್ ಸುರಂಗ ಕೊರೆಯುವ ಮಾರ್ಗವನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದ್ದು, 9 ಯಂತ್ರಗಳನ್ನು ನಿಯೋಜಿಸಲಾಗಿದೆ. ಇವುಗಳ ಪೈಕಿ 3 ಟಿಬಿಎಂಗಳಾದ ಊರ್ಜಾ, ವರದ ಮತ್ತು ಅವ್ನಿ ಈಗಾಗಲೇ ತಮ್ಮ ಕಾಮಗಾರಿ ಪೂರ್ಣಗೊಳಿಸಿವೆ ಎಂದು ವಿವರಿಸಿದೆ.
15,210 ಮೀಟರ್ ಸುರಂಗ ಕೊರೆಯಲಾಗಿದ್ದು, ಪಾಟರಿ ಟೌನ್ ನಿಲ್ದಾಣದಿಂದ ಶಾದಿಮಹಲ್ ತನಕ ಸುರಂಗ ಕೊರೆಯುತ್ತಿರುವ ಟಿಬಿಎಂ ವಿಂಧ್ಯಾ, ಈ ತಿಂಗಳ ಅಂತ್ಯದ ವೇಳೆಗೆ ತನ್ನ ಕಾರ್ಯವನ್ನು ಪೂರ್ಣಗೊಳಿಸಲು ಯೋಜಿಸಿದೆ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.