ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಬಿಸಿಯೂಟ ಸಿಬ್ಬಂದಿ ಬೃಹತ್ ಪ್ರತಿಭಟನೆ

Last Updated 21 ಜನವರಿ 2020, 7:23 IST
ಅಕ್ಷರ ಗಾತ್ರ

ಬೆಂಗಳೂರು: ಕನಿಷ್ಠ ವೇತನ, ಪಿಂಚಣಿ, ನೌಕರಿ ಕಾಯಮಾತಿ, ಇ.ಎಸ್.ಐ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಬಿಸಿಯೂಟ ತಯಾರಕ ಸಿಬ್ಬಂದಿ ‘ಬೆಂಗಳೂರು ಚಲೋ’ಹಮ್ಮಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘ ಪ್ರತಿಭಟನೆಯ ನೇತೃತ್ವ ವಹಿಸಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ನೂರಾರು ಬಿಸಿಯೂಟ ಕಾರ್ಯಕರ್ತರು ಮೆರವಣಿಗರ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ತೆರಳಿದರು. ಪ್ರತಿಭಟನಾ ಮೆರವಣಿಗೆಯಿಂದ ಮೆಜೆಸ್ಟಿಕ್, ಗಾಂಧಿನಗರ, ಆನಂದ ರಾವ್ ವೃತ್ತದ‌ ಬಳಿ ಸಂಚಾರ ದಟ್ಡಣೆ ಉಂಟಾಗಿದೆ. ಪ್ರತಿಭಟನೆ ಎರಡು ದಿನ‌ ನಡೆಯಲಿರುವುದರಿಂದ,ಎರಡು ದಿನಕ್ಕೆ ಅಗತ್ಯವಾದ ಉಪಹಾರ ಮತ್ತು ಹೊದಿಕೆ ತರುವಂತೆ ಸಂಘಟಕರು ಸೂಚಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 1.18 ಲಕ್ಷ ಬಿಸಿಯೂಟ ತಯಾರಕರಿದ್ದಾರೆ. ಮಂಗಳವಾರ ಮತ್ತು ಬುಧವಾರ ಅಹೋರಾತ್ರಿ ಪ್ರತಿಭಟನೆ ನಡೆಸಲು ಕಾರ್ಯಕರ್ತರು ನಿರ್ಧರಿಸಿರುವುದರಿಂದ ಈ ಎರಡು ದಿನ ಬಿಸಿಯೂಟ ವ್ಯವಸ್ಥೆ ವ್ಯತ್ಯಯ ಆಗಲಿದೆ

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಪ್ರತಿಭಟನಾಕಾರರು ಎರಡು ದಿನಕ್ಕೆ ಬೇಕಾಗುವಷ್ಟು ಆಹಾರ ಹಾಗೂ ಹಾಸಿಗೆ, ಹೊದಿಕೆಯನ್ನು ತರಬೇಕು ಎಂದು ಸಂಘಟಕರು ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT