ಇದೇ ಸಂದರ್ಭದಲ್ಲಿ ಬೆಂಗಳೂರಿನ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು. ಸಿಎಚ್‌ಎಎಫ್ ಪ್ರಾಂಶುಪಾಲರಾದ ಬ್ರಿಗೇಡಿಯರ್ ಆರ್. ವಿಜಯರಾಣಿ, ಮಿಲಿಟರಿ ನರ್ಸಿಂಗ್ ಸೇವೆಯ ಮಾಜಿ ಹೆಚ್ಚುವರಿ ನಿರ್ದೇಶಕ ಮೇಜರ್ ಜನರಲ್ ಎಲಿಜಬೆತ್ ಜಾನ್ (ನಿವೃತ್ತ) ಅವರು ವೀರ ಯೋಧರಿಗೆ ನಮನ ಸಲ್ಲಿಸಿದರು.