ಮಂಗಳವಾರ, ಅಕ್ಟೋಬರ್ 20, 2020
23 °C

ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರ್ ನಿಧನಕ್ಕೆ ಗಣ್ಯರಿಂದ ಸಂತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

pawan

ಬೆಂಗಳೂರು: ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ನಿಧನಕ್ಕೆ ಸಚಿವರು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವರದಿಗಾರಾದ ಶ್ರೀ ಪವನ್ ಹೆತ್ತೂರು ಅವರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಡಾ.ಕೆ. ಸುಧಾಕರ್ ಟ್ವೀಟಿಸಿದ್ದಾರೆ.

 

ಪತ್ರಕರ್ತರನ್ನು ಕೊರೊನಾ ವಾರಿಯರ್ಸ್‌ ಎಂದು ಘೋಷಿಸುವುದರ ಮೂಲಕ, ಪತ್ರಕರ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಶಾಸಕ ಜಿಟಿ ದೇವೇಗೌಡ ಅವರು ಒತ್ತಾಯಿಸಿದ್ದಾರೆ.

***********

ಯುವ ಪತ್ರಕರ್ತರಾದ ಪವನ್ ಹೆತ್ತೂರು ಅವರ ಅಕಾಲಿಕ ನಿಧನ ತೀವ್ರ ಬೇಸರ ತಂದಿದೆ. ಕರೋನಾ ಹೆಮ್ಮಾರಿ ಅವರನ್ನು ಬಲಿ ಪಡೆದಿರುವುದು ನಿಜಕ್ಕೂ ಖೇದಕರ. ಪತ್ರಕರ್ತರು ಕೊರೋನಾ ವಾರಿಯರ್ಸ್ ಆಗಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಾನು ಈ ಮೂಲಕ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡುತ್ತೇನೆ. ಪವನ್ ಅವರ ನಿಧನದ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.

-ಎಸ್.ಟಿ.ಸೋಮಶೇಖರ್ 
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು

**********

ದಿನೇಶ್ ಗಂಡೂರಾವ್ ಸಂತಾಪ

**********

ಮೈಸೂರು ಪ್ರಜಾವಾಣಿ ವರದಿಗಾರರಾದ ಶ್ರೀ  ಪವನ್ ಹೆತ್ತೂರು ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ.  ಚಿಕ್ಕ ವಯಸ್ಸಿಗೆ ಅವರು ಅಗಲಿರುವುದು ಅತ್ಯಂತ ದುಃಖ ಉಂಟು ಮಾಡಿದೆ.

ಪ್ರಜಾವಾಣಿ, ಅದಕ್ಕೂ ಹಿಂದೆ ವಿಜಯವಾಣಿ, ಕಸ್ತೂರಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು, ಮಾಧ್ಯಮ ಲೋಕದಲ್ಲಿ ಉತ್ತಮವಾಗಿ ಬೆಳೆಯುವ ಮೂಲಕ ಭರವಸೆ ಮೂಡಿಸಿದ್ದರು. ಸದ್ಯಕ್ಕೆ ಮೈಸೂರಿನ ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್; ಕೋವಿಡ್’ಗೆ ತುತ್ತಾಗಿದ್ದಾರೆ. 

ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತಾ ಎಲ್ಲ ಪತ್ರಕರ್ತ ಮಿತ್ರರು ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.

- ಡಾ.ಸಿ.ಎನ್ ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ

*********

 

 

 

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.