ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಹಣ ದುರುಪಯೋಗ: 8 ಅಧಿಕಾರಿಗಳ ಅಮಾನತು

Last Updated 31 ಡಿಸೆಂಬರ್ 2019, 21:36 IST
ಅಕ್ಷರ ಗಾತ್ರ

ಬೆಂಗಳೂರು: ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಬೆಂಗಳೂರು ನಗರ ಜಿಲ್ಲಾ ಕಚೇರಿಯಲ್ಲಿ 2016–17 ಮತ್ತು 2017–18 ನೇ ಸಾಲಿನಲ್ಲಿ ₹6.30 ಕೋಟಿ ಅನುದಾನವನ್ನು ಮಧ್ಯವರ್ತಿಗಳಿಗೆ ಬಿಡುಗಡೆ ಮಾಡಿ ಹಣ ದುರುಪಯೋಗ ಮಾಡಿರುವ ಆರೋಪದ ಮೇಲೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಸ್ವಯಂ ಉದ್ಯೋಗ ಯೋಜನೆ ಮತ್ತು ಕೈಗಾರಿಕಾ ಸೇವಾ ವ್ಯವಹಾರ ಯೋಜನೆಯಡಿ ಪರಿಶಿಷ್ಟ ಜಾತಿಯ 115 ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡಬೇಕಿತ್ತು. ಆದರೆ, ಅಧಿಕಾರಿಗಳು ಆ ಹಣವನ್ನು ಮಧ್ಯವರ್ತಿಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಭಿವೃದ್ಧಿ ನಿಗಮದ ಅಂದಿನ ಜಿಲ್ಲಾ ವ್ಯವ ಸ್ಥಾಪಕ ಹಾಗೂ ಈಗಿನ ಉಪ ಪ್ರಧಾನ ವ್ಯವಸ್ಥಾಪಕ ಎಚ್‌.ಆರ್‌.ಅರುಣ್‌, ಅಂದಿನ ಜಿಲ್ಲಾ ವ್ಯವಸ್ಥಾಪಕ ಮತ್ತು ಇಂದಿನ ಉಪ ಪ್ರಧಾನ ವ್ಯವಸ್ಥಾಪಕ ಜೆ.ಜಿ.ಪದ್ಮನಾಭ, ಕಚೇರಿ ಅಧೀಕ್ಷಕಿ ಎಂ.ಸಿ.ಇಂದಿರಮ್ಮ, ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳಾದ ಪಿ. ಮಲ್ಲೇಶ್‌, ಎನ್.ಮುಕುಂದ,ಎಂ. ಲಿಂಗಣ್ಣ, ದ್ವಿತೀಯ ದರ್ಜೆ ಸಹಾಯಕರಾದ ಕಲ್ಪನಾ, ಪುಟ್ಟೀರಯ್ಯ ಮತ್ತು ಪ್ರಥಮ ದರ್ಜೆ ಸಹಾಯಕ ಹೇಮಂತ ಕುಮಾರ್‌ ಅಮಾನತಾದವರು.

ಕೆನರಾ ಬ್ಯಾಂಕ್‌ ಕಲ್ಕರೆ ಶಾಖೆಯ ಅಂದಿನ ವ್ಯವಸ್ಥಾಪಕರು ಮತ್ತು ಇತರೆ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಮಧ್ಯವರ್ತಿಗಳಾದ ಗೋವಿಂದ ರಾಜು, ಸೈಯದ್‌ ಸಾದಿಕ್‌, ಜಿಮರನ್‌ ಪಾಷಾ, ಅಮರ್‌, ಸತ್ಯನಾರಾಯಣ, ಜೆ. ಶ್ರೀಧರ, ಕೆ. ಮಂಜುನಾಥ್‌, ಭುವನೇಶ್‌, ಕೋದಂಡರಾಮ ಮತ್ತು ಜೀವರಾಜ್‌ ಅವರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಮಾಗಡಿ ಪೊಲೀಸ್‌ ಠಾಣೆ ಯಲ್ಲಿ ದೂರು ದಾಖಲಿಸಲಾಗಿದೆ ಎಂದು ನಿಗಮದ ಬೆಂಗಳೂರು ನಗರ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT