ಬೆಂಗಳೂರು: ಮೋರ್ಚಿಂಗ್ ವಾದಕ ಎಲ್. ಭೀಮಾಚಾರ್ (93) ಅವರು ಮಂಗಳವಾರ ನಿಧನರಾಗಿದ್ದಾರೆ.

ಇಲ್ಲಿನ ಮಂಜುನಾಥ ನಗರದಲ್ಲಿ ನೆಲಸಿದ್ದ ಅವರು, ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಒಬ್ಬರು ಪುತ್ರ, ಇಬ್ಬರು ಪುತ್ರಿಯರು ಹಾಗೂ ಎಂಟು ಮಂದಿ ಮೊಮ್ಮಕ್ಕಳು ಇದ್ದಾರೆ. ಹರಿಶ್ಚಂದ್ರ ಘಾಟ್‌ನಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು.

1931ರಲ್ಲಿ ಜನಿಸಿದ ಭೀಮಾಚಾರ್ ಅವರು, ಮೋರ್ಚಿಂಗ್ ಕಲಾವಿದರೇ ಇಲ್ಲದ ಕಾಲದಲ್ಲಿ ಅದನ್ನು ನುಡಿಸಲು ಪ್ರಾರಂಭಿಸಿದ್ದರು. ಅವರು ದೇಶ ವಿದೇಶಗಳಲ್ಲಿ ಕಛೇರಿ ನೀಡಿದ್ದಾರೆ. ಸಂಗೀತ ವಲಯದಲ್ಲಿ ‘ಮೋರ್ಚಿಂಗ್ ಭೀಮ’ ಎಂದೇ ಪ್ರಸಿದ್ಧರಾಗಿದ್ದರು.

ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ನಾದಜ್ಯೋತಿ ಪುರಸ್ಕಾರ, ಲಯವಾದ್ಯ ಕಲಾರತ್ನ, ಲಯವಾದ್ಯ ಕಲಾನಿಧಿ, ಗಾನ ಕಲಾಭೂಷಣ ಸೇರಿ ವಿವಿಧ ಸಂಗೀತ ಸಂಸ್ಥೆಗಳ ಪುರಸ್ಕಾರಗಳು ಅವರಿಗೆ ಸಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.