ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತ: ಅಧ್ಯಯನ ವರದಿ

ದೇಶದ ಮೊಟ್ರೊ ನಗರಗಳಲ್ಲಿ ಅಕೊ ಸಂಸ್ಥೆಯ ಅಧ್ಯಯನ
Last Updated 13 ಸೆಪ್ಟೆಂಬರ್ 2022, 19:56 IST
ಅಕ್ಷರ ಗಾತ್ರ

ಬೆಂಗಳೂರು: ಅಕೊ ಸಂಸ್ಥೆಯು ಅಪಘಾತ ವಲಯಗಳ ಅಧ್ಯಯನ ನಡೆಸಿದ್ದು, ದೇಶದ ಮಹಾನಗರಗಳ ಪೈಕಿ ಬೆಂಗಳೂರು ಕಡಿಮೆ ಅಪಘಾತಗಳಾಗಿರುವ ನಗರ ಎನಿಸಿದೆ. ನಗರದಲ್ಲಿ ಸರಾಸರಿ ಶೇ 16 ಅಪಘಾತ ಪ್ರಮಾಣ ದಾಖಲಾಗಿದೆ.

ದೆಹಲಿ, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ನಗರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಅಪಘಾತಗಳಾಗಿರುವ ನಗರವಾಗಿ ಬೆಂಗಳೂರಿದೆ ಎಂದು ಅಕೊದ ಮೋಟರ್ ಅಂಡರ್ ರೈಟಿಂಗ್‌ ಹಿರಿಯ ನಿರ್ದೇಶಕ ಅನಿಮೇಶ್ ದಾಸ್ ತಿಳಿಸಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಶೇ 9ರಷ್ಟು ಅಪಘಾತಗಳು ಸಂಭವಿಸಿದ್ದರೆ, ಕಲ್ಯಾಣ ನಗರದದಲ್ಲಿ ಶೇ 8ರಷ್ಟು ಅಪಘಾತ ಪ್ರಕರಣಗಳು ದಾಖಲಾಗಿವೆ. ಬನ್ನೇರುಘಟ್ಟದಿಂದ ಹೂಡಿಯ 50 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿನಿತ್ಯ ಹೆಚ್ಚು ವಾಹನ ದಟ್ಟಣೆ ಕಂಡುಬಂದಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಹೆಚ್ಚಿನ ಅಪಘಾತ ವಲಯ ಎನಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

‘ಅಪಘಾತಗಳಿಗೆ ಕೆಟ್ಟ ರಸ್ತೆಗಳೇ ಕಾರಣವೆಂದು ದೂಷಿಸುತ್ತೇವೆ. ಆದರೆ, ಅಪಘಾತಕ್ಕೆ ಬೇರೆ ಕಾರಣ ಗಳೂ ಇವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ರಸ್ತೆ ಅಪಘಾತ ದಿಂದ ಸಾವು ನೋವು ಸಂಭವಿಸು ತ್ತಿವೆ. ಅವುಗಳನ್ನು ತಪ್ಪಿಸಲು ಸಾಧ್ಯವಿದೆ. ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಅನಿಮೇಶ್ ದಾಸ್ ತಿಳಿಸಿದ್ದಾರೆ.

‘ಅಕೊ ವಿಮಾ ಕಂಪನಿ ಆಗಿದ್ದು, ಏಳು ಕೋಟಿಗೂ ಹೆಚ್ಚು ಗ್ರಾಹಕರು ಇದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ, ನಿರ್ಲಕ್ಷ್ಯದಿಂದ ವಾಹನ ಚಾಲನೆ, ಬೀದಿಗಳಲ್ಲಿ ಪ್ರಾಣಿಗಳ ರಸ್ತೆ ದಾಟುವಿಕೆಯಿಂದ ಹಾಗೂ ಗುಂಡಿಬಿದ್ದ ರಸ್ತೆಗಳಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ’ ಎಂದು ಮಾಹಿತಿ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಅಪಘಾತದ ಪ್ರಮಾಣ ಶೇ 18.5ರಷ್ಟಿದೆ. ಚೆನ್ನೈನಲ್ಲಿ ಶೇ 18.6ರಷ್ಟು ಅಪಘಾತಗಳು ಹಾಗೂ ದೆಹಲಿಯಲ್ಲಿ ಶೇ 20.3ರಷ್ಟು ಅಪಘಾತಗಳು ವಾರ್ಷಿಕವಾಗಿ ನಡೆಯುತ್ತಿವೆ ಎಂದು ಅಧ್ಯಯನ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT