ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ 750ಕ್ಕೂ ಹೆಚ್ಚು ಕಡತ ಬಾಕಿ

Published 6 ಫೆಬ್ರುವರಿ 2024, 16:19 IST
Last Updated 6 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎಗೆ ಸಂಬಂಧಿಸಿದ 750ಕ್ಕೂ ಕಡತಗಳು ನಗರಾಭಿವೃದ್ಧಿ ಇಲಾಖೆಯಲ್ಲಿ 30 ದಿನಗಳಿಗೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ.

ಬಾಕಿ ಉಳಿದಿರುವ ಕಡತಗಳನ್ನು ನಿಯಮಿತವಾಗಿ ವಿಲೇವಾರಿ ಮಾಡಲು ಸೂಚನೆ ಇದ್ದರೂ 550ಕ್ಕೂ ಹೆಚ್ಚು ಕಡತಗಳು 2 ತಿಂಗಳಿಂದ ಬಾಕಿ ಉಳಿದಿವೆ.

ನಿಯಮದಂತೆ, ಕಡತ ಬಂದ 10 ದಿನಗಳಲ್ಲಿ ಅದನ್ನು ಮಂಜೂರು ಮಾಡಬೇಕು ಅಥವಾ ತಿರಸ್ಕರಿಸಬೇಕು. ಒಂದು ಕಡತ ಅಧಿಕಾರಿಗಳು ಸೇರಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಒಂಬತ್ತು ದಿನಗಳಲ್ಲಿ ತಲುಪಬೇಕು. ಅದರ ನಂತರ ಸಚಿವರಿಗೆ ಅಂತಿಮ ನಿರ್ಧಾರಕ್ಕೆ ಕಡತ ರವಾನೆಯಾಗಬೇಕು. ಆದರೆ, 30 ದಿನಗಳಾದರೂ ಕಡತಗಳು ವಿಲೇವಾರಿಯಾಗಿಲ್ಲ.

ಬಿಬಿಎಂಪಿ ಮತ್ತು ಬಿಡಿಎ ವತಿಯಿಂದ ಒಟ್ಟಾರೆ 1,138 ಕಡತಗಳು ನಗರಾಭಿವೃದ್ಧಿ ಇಲಾಖೆಗೆ ಹೋಗಿವೆ. ಭೂ ಬಳಕೆ ಬದಲಾವಣೆ, ಗುತ್ತಿಗೆಗಳು ಮತ್ತು ಹೊಸ ಅನುದಾನಕ್ಕೆ ಸಂಬಂಧಿಸಿದ ಕಡತಗಳೇ ಇದರಲ್ಲಿ ಹೆಚ್ಚಾಗಿವೆ.

‘ಸಚಿವಾಲಯ ಕೈಪಿಡಿ ಪ್ರಕಾರ, ಒಂದು ದಿನದಲ್ಲಿ ಕಡತವನ್ನು ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಹಿರಿಯ ಅಧಿಕಾರಿಗೆ ವಿವರಣೆ ನೀಡಬೇಕು. ಸಚಿವಾಲಯದ ಸಿಬ್ಬಂದಿ ಕಡತಗಳನ್ನು ಉಳಿಸಿಕೊಳ್ಳುವುದಿಲ್ಲ. ಐಎಎಸ್‌ ಅಧಿಕಾರಿಗಳು ಹಾಗೂ ಸಚಿವರ ಕಚೇರಿಯಲ್ಲೇ ಕಡತಗಳು ಹೆಚ್ಚು ದಿನ ಬಾಕಿ ಉಳಿದುಕೊಳ್ಳುತ್ತವೆ’ ಎಂದು ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT