ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಪಡೆದವರೇ ಹೆಚ್ಚಿನ ನಿರುದ್ಯೋಗಿಗಳು!

ಪದವಿ ಓದಿದವರಲ್ಲಿ ಶೇ 6.6ರಷ್ಟು ಮಂದಿಗೆ ಕೆಲಸವಿಲ್ಲ ಎನ್ನುತ್ತಿದೆ ಎನ್‌ಎಸ್‌ಎಸ್‌ಒ ವರದಿ
Last Updated 10 ಆಗಸ್ಟ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗದ ಸಮಸ್ಯೆ ಯಾರಲ್ಲಿ ಹೆಚ್ಚು? ಶಾಲೆಗೆ ಹೋಗದವರಲ್ಲೋ ಅಥವಾ ಹೆಚ್ಚು ಓದಿದವರಲ್ಲೋ?

ಶಾಲೆಯ ಕಟ್ಟೆಯನ್ನು ಏರದವರಿಗಿಂತಲೂ ಉನ್ನತ ಶಿಕ್ಷಣ ಪಡೆದವರಲ್ಲೇ ಹೆಚ್ಚಿನವರು ಉದ್ಯೋಗಕ್ಕಾಗಿ ಒದ್ದಾಡುತ್ತಿದ್ದಾರೆ ಎನ್ನುತ್ತದೆನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಶನ್ (ಎನ್‌ಎಸ್‌ಎಸ್‌ಒ) ನಡೆಸಿದ ಅಧ್ಯಯನ ವರದಿ.

ಶೈಕ್ಷಣಿಕ ಮತ್ತು ಸಮಾಜ ಅಧ್ಯಯನ ಕೇಂದ್ರ (ಸಿಇಎಸ್‌ಎಸ್), ನ್ಯಾಕ್‌ ಹಾಗೂ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಎಚ್‌ಇಸಿ) ಜಂಟಿಯಾಗಿ ನಗರದಲ್ಲಿ ಶುಕ್ರವಾರದಿಂದ ಏರ್ಪಡಿಸಿರುವ ‘ಪದವಿ ಶಿಕ್ಷಣದ ಪುನಶ್ಚೇತನ’ ಕುರಿತ ಕಾರ್ಯಾಗಾರದಲ್ಲಿ ಈ ವಿಷಯವೇ ಚರ್ಚೆಯ ಕೇಂದ್ರಬಿಂದು.

ಶಾಲೆಗೆ ಹೋಗದವರು ಶೇ 0.3ರಷ್ಟು ಮಂದಿಯಷ್ಟೇ ಉದ್ಯೋಗಕ್ಕಾಗಿ ಪರಿತಪಿಸಿದರೆ,ಪ್ರಾಥಮಿಕ ಶಾಲೆ ಮುಗಿಸಿದವರಲ್ಲಿ ಶೇ 0.7ರಷ್ಟು, ಮಾಧ್ಯಮಿಕ ಶಿಕ್ಷಣ ಪಡೆದವರಲ್ಲಿ ಶೇ 1.2ರಷ್ಟು, ಪ್ರೌಢಶಾಲೆ ಹೋಗಿದ್ದವರಲ್ಲಿ ಶೇ 2.5ರಷ್ಟು, ಪಿಯು ಶಿಕ್ಷಣ ಪಡೆದವರಲ್ಲಿ ಶೇ 2.8ರಷ್ಟು ಹಾಗೂ ಪದವಿ ಓದಿದವರಲ್ಲಿ ಶೇ 6.6ರಷ್ಟು ಮಂದಿ ಕೆಲಸ ಪಡೆಯಲು ಒದ್ದಾಡುತ್ತಿದ್ದಾರೆ ಎಂಬಎನ್‌ಎಸ್‌ಎಸ್‌ಒ ವರದಿಯನ್ನು ಶಿಕ್ಷಣತಜ್ಞ ಡಾ. ಎಸ್. ವಿದ್ಯಾಸುಬ್ರಮಣಿಯಂ ಉಲ್ಲೇಖಿಸಿದರು.

‘ಕೌಶಲ ಭರಿತವಾದ ಶಿಕ್ಷಣ ನೀಡುವುದು ಇಂದಿಗೂ ನಮ್ಮ ವಿಶ್ವವಿದ್ಯಾಲಯಗಳಿಗೆ ಸಾಧ್ಯವಾಗುತ್ತಿಲ್ಲ. ಹೆಚ್ಚೆಚ್ಚು ಶಿಕ್ಷಣ ಪಡೆದಷ್ಟು ನಿರುದ್ಯೋಗ ಸಮಸ್ಯೆ ಎದುರಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದು ಶಿಕ್ಷಣದ ಬಿಕ್ಕಟ್ಟುಗಳನ್ನು ಬಿಚ್ಚಿಟ್ಟರು.

ಎಬಿವಿಪಿ ರಾಷ್ಟ್ರೀಯ ಮಟ್ಟದ ಪ್ರಧಾನ ಕಾರ್ಯದರ್ಶಿ ಆಶಿಶ್‌ ಚೌಹಾಣ್‌, ‘ನಮ್ಮ ದೇಶದಲ್ಲಿ ಅಣಬೆಗಳ ರೀತಿ, ಹೇಗೆಂದರೆ ಹಾಗೆ ಕಾಲೇಜುಗಳು ನಿರ್ಮಾಣವಾಗಿವೆ. ಚೀನಾ, ಅಮೆರಿಕಕ್ಕೆ ಹೋಲಿಸಿದರೆ ನಮ್ಮಲ್ಲಿಯೇ ಹೆಚ್ಚು ಸಂಖ್ಯೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳಿವೆ. ಆದರೆ, ಶಿಕ್ಷಣದ ಗುಣಮಟ್ಟ ಮಾತ್ರ ಕೆಳಮಟ್ಟದಲ್ಲಿದೆ. ಪದವಿ ಶಿಕ್ಷಣ ಕಲಿಕೆಗೂ, ವಾಸ್ತವಕ್ಕೂ ಅಜಗಜಾಂತವಿದೆ’ ಎಂದು ಹೇಳಿದರು.

ಯೂತ್‌ ಫಾರ್‌ ಸೇವಾ ರಾಷ್ಟ್ರೀಯ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್‌ ಮೂರ್ತಿ, ‘ಕಲಿಕೆಯ ಮಟ್ಟ ಹೆಚ್ಚಾಗುತ್ತಿದ್ದಂತೆ ವಿದ್ಯಾರ್ಥಿಗಳು ಸಮಾಜಕ್ಕೆ ಮಿಡಿಯುವ ಮನಸ್ಸನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯಾದ ಶಿಕ್ಷಣ ವ್ಯವಸ್ಥೆ ಮಕ್ಕಳು ಬೆಳೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT