ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಹೆಬ್ಬಗೋಡಿ ಮೆಟ್ರೊ ನಿಲ್ದಾಣಕ್ಕೆ ಬಯೋಕಾನ್ ಫೌಂಡೇಷನ್ ₹65 ಕೋಟಿ ನೀಡಲಿದೆ. ಈ ಕುರಿತು ಒಪ್ಪಂದಕ್ಕೆ ಬಯೋಕಾನ್ ಫೌಂಡೇಷನ್ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ಗುರುವಾರ ಸಹಿ ಹಾಕಿವೆ.

ಬಯೋಕಾನ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಈ ಹಣವನ್ನು ನೀಡಲಾಗುತ್ತಿದ್ದು, ಹೆಬ್ಬಗೋಡಿ ನಿಲ್ದಾಣಕ್ಕೆ ‘ಬಯೋಕಾನ್ ಹೆಬ್ಬಗೋಡಿ ಮೆಟ್ರೊ ನಿಲ್ದಾಣ’ ಎಂದು ಹೆಸರಿಡಲು ಉಭಯ ಸಂಸ್ಥೆಗಳು ಸರ್ಕಾರವನ್ನು ಕೋರಲಿವೆ.

ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ (ರೀಚ್ 5) 18.82 ಕಿ.ಮೀ. ಉದ್ದದ ಹೊಸ ಮಾರ್ಗದಲ್ಲಿ ಈ ನಿಲ್ದಾಣ ಬರಲಿದೆ. ಹೊಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ಈ ಮಾರ್ಗ ನಿರ್ಮಾಣದಿಂದ ಪರಿಹಾರ ದೊರೆಯಲಿದೆ.

‘ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗುವ, ಸಂಚಾರಕ್ಕೆ ಪರ್ಯಾಯ ಮಾರ್ಗ ಒದಗಿಸುವ ಮೆಟ್ರೊ ರೈಲು ಮಾರ್ಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ನಿಲ್ದಾಣ ನಿರ್ಮಾಣಕ್ಕಾಗಿ ₹65 ಕೋಟಿ ನೀಡಲು ಸಂತಸವಾಗುತ್ತಿದೆ. ಪರಿಸರ ಸುಸ್ಥಿರತೆಯ ಬಗೆಗಿನ ನಮ್ಮ ಜವಾಬ್ದಾರಿಯ ದ್ಯೋತಕ ಇದು’ ಎಂದು ಬಯೋಕಾನ್ ಫೌಂಡೇಷನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಹೇಳಿದರು.

5 ವರ್ಷಗಳಲ್ಲಿ 128 ಕಿ.ಮೀ. ಹೊಸ ಜಾಲ:

ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ‘ಮುಂದಿನ ಐದು ವರ್ಷಗಳಲ್ಲಿ 128 ಕಿ.ಮೀ. ಹೊಸ ಮಾರ್ಗವನ್ನು ನಿರ್ಮಿಸಲು ನಿಗಮ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ಪ್ರಗತಿಯಲ್ಲಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.