ಭಾನುವಾರ, ಏಪ್ರಿಲ್ 18, 2021
24 °C

ರಾಮಯ್ಯ ವಿಕಸನ ಕೇಂದ್ರ: ನವೋದ್ಯಮಕ್ಕೆ ಸಹಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನವೋದ್ಯಮದ ಆಲೋಚನೆ ಇರುವವರು, ಅದಕ್ಕಾಗಿ ಧನಸಹಾಯ ನಿರೀಕ್ಷೆ ಮಾಡುತ್ತಿರುವವರಿಗೆ ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯ ನೀಡಲು ರಾಮಯ್ಯ ಸಮೂಹ ಸಂಸ್ಥೆ ‘ರಾಮಯ್ಯ ವಿಕಸನ’ ಎಂಬ ಹೊಸ ಕೇಂದ್ರ ಸ್ಥಾಪಿಸಿದೆ.

ಈ ಕೇಂದ್ರದಲ್ಲಿ ನವೋದ್ಯಮ ಆರಂಭಿಸಿ ಯಶಸ್ವಿಯಾಗಿದವರು ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ವಿಕಸನ ಕೇಂದ್ರಕ್ಕೆ ಗೋಕುಲ ಎಜುಕೇಷನ್ ಫೌಂಡೇಷನ್‌ನ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಯರಾಂ, ‘ಇದು ನವೋದ್ಯಮಿಗಳಿಗೆ ಉತ್ತಮವಾದ ವೇದಿಕೆಯಾಗಿದೆ. ಅವರಲ್ಲಿನ ಆಲೋಚನೆಗಳಿಗೆ ಮೂರ್ತ ರೂಪ ನೀಡುವ ಕೆಲಸವನ್ನು ಈ ವಿಕಸನ ಮಾಡಲಿದೆ. ಈ ಕೇಂದ್ರದಲ್ಲಿರುವ ಮಾರ್ಗದರ್ಶಕರು ಈ ಹಿಂದೆ ಹಲವು ನವೋದ್ಯಮಗಳನ್ನು ಆರಂಭಿಸಿ ಯಶಸ್ವಿಯಾಗಿ ನಡೆಸಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಹೆಚ್ಚು ಅನುಭವ ಹೊಂದಿದ್ದಾರೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ಹೊರಗಿನವರು ಕೂಡ ಭಾಗವಹಿಸಬಹುದು. ಅವರಿಗೆ ಮಾರ್ಗದರ್ಶನದ ಜತೆಗೆ ₹50 ಲಕ್ಷ ತನಕ ಸಹಾಯ ಮಾಡಲಾಗುವುದು’ ಎಂದರು.

‘ನಮ್ಮ ದೇಶದ ಜಿಡಿಪಿ ಬೆಳವಣಿಗೆ ಸಾಧಿಸಬೇಕಾದರೆ ತಂತ್ರಜ್ಞಾನದಲ್ಲಿ ಹೆಚ್ಚು ಪರಿಣಿತಿ ಪಡೆಯಬೇಕು. ನವೋದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು