ಆರೋಪಪಟ್ಟಿ ಸಲ್ಲಿಕೆ ಸಿದ್ಧತೆ:
ರೇಣುಕಸ್ವಾಮಿ ಅವರ ಕೊಲೆ ನಡೆದ ಸ್ಥಳ, ಮೃತದೇಹ ಎಸೆದ ಕಾಲುವೆ ಬಳಿ ಹಾಗೂ ಆರೋಪಿಗಳ ಮನೆಗಳಲ್ಲಿ ಬೆಂಗಳೂರು, ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್) ತಜ್ಞರು ಹಲವು ಮಾದರಿ ಸಂಗ್ರಹಿಸಿದ್ದರು. ಅದರಲ್ಲಿ ಶೇ 70ರಷ್ಟು ಪರೀಕ್ಷಾ ವರದಿಗಳು ತನಿಖಾಧಿಕಾರಿಗಳ ಕೈಸೇರಿವೆ. ಉಳಿದ ವರದಿಗಳು ಕೆಲವೇ ದಿನಗಳಲ್ಲಿ ಬರುವ ಸಾಧ್ಯತೆಯಿದ್ದು, ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧತೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.