ಬೆಂಗಳೂರು: ಬ್ಯಾಟರಾಯನಪುರ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ (ಆ. 8) ನಡೆದಿದ್ದ ಇಸ್ಲಾಂ ಖಾನ್ (36) ಎಂಬಾತನ ಕೊಲೆ ಪ್ರಕರಣ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಾಮಣ್ಣ ಗಾರ್ಡನ್ ನಿವಾಸಿಗಳಾದ ಫೈಸಲ್ ಪಾಷಾ (21), ಪುರ್ಖಾನ್ (23), ನಯಾಜ್ ಪಾಷಾ (27), ತೌಸಿಫ್ ಪಾಷಾ (22), ಶೋಯೆಬ್ ಪಾಷಾ (22) ಹಾಗೂ ಆದಿಲ್ ಖಾನ್ (21) ಬಂಧಿತರು.

‘ಕೊಲೆ, ಕೊಲೆಗೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಇಸ್ಲಾಂ ಖಾನ್, ಜೈಲಿಗೆ ಹೋಗಿ ಜಾಮೀನು ಮೇಲೆ ಹೊರ ಬಂದಿದ್ದ. ಉದ್ಯಮವೊಂದನ್ನು ನಡೆಸುತ್ತ ಪುನಃ ಅಪರಾಧ ಕೃತ್ಯ ಎಸಗುತ್ತಿದ್ದ. ಆರೋಪಿಗಳ ಪೈಕಿ ಒಬ್ಬಾತನ ಜೊತೆ ಇತ್ತೀಚೆಗೆ ಜಗಳ ಮಾಡಿದ್ದ ಇಸ್ಲಾಂ ಖಾನ್, ಎಚ್ಚರಿಕೆ ನೀಡಿದ್ದ. ಅದೇ ಸೇಡಿನಿಂದ ಆರೋಪಿಗಳು, ಸಂಚು ರೂಪಿಸಿ ಇಸ್ಲಾಂ ಖಾನ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.