ಬೆಂಗಳೂರು: ಬೆಂಗಳೂರು ಗಾಯನ ಸಮಾಜದ 54ನೇ ಸಂಗೀತ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಗಾಯಕ ಹಾಗೂ ಸಂಗೀತ ತಜ್ಞ ಎಸ್.ಸಿ.ಶರ್ಮ ಆಯ್ಕೆಯಾಗಿದ್ದಾರೆ.

ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ನವೆಂಬರ್ 3ರಿಂದ 10ರವರೆಗೆ ಈ ಸಮ್ಮೇಳನ ನಡೆಯಲಿದೆ. ಸಂಗೀತ ವಿದ್ವಾಂಸರಿಂದ ಭಾಷಣ, ಸಂಗೀತ ಪ್ರಾತ್ಯಕ್ಷಿಕೆ, ಚರ್ಚಾಗೋಷ್ಠಿಗಳು ನಡೆಯಲಿವೆ. ಪ್ರಸಿದ್ಧ ಕಲಾವಿದರು ಹಾಗೂ ಉದಯೋನ್ಮುಖ ಕಲಾವಿದರಿಂದ ಸಂಗೀತ ಕಛೇರಿ ಏರ್ಪಡಿಸಲಾಗಿದೆ.

ಎಸ್.ಸಿ.ಶರ್ಮ ಅವರಿಗೆ ಸಮ್ಮೇಳನದಲ್ಲಿ ‘ಸಂಗೀತ ಕಲಾರತ್ನ’ ಬಿರುದು, ಉಡುಪಿಯ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ‘ಕರ್ನಾಟಕ ಕಲಾಚಾರ್ಯ’ ಬಿರುದು ನೀಡಿ ಗೌರವಿಸಲಾಗುವುದು ಎಂದು ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.