ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್‌ಐಸಿ) ವತಿಯಿಂದ ಏರ್ಪಡಿಸಿದ್ದ ‘ಮೈಸೂರು ಸಿಲ್ಕ್ ವಿಂಟೇಜ್ ಸಾರಿ’ಸ್ಪರ್ಧೆಯಲ್ಲಿ ಪದ್ಮಾವತಿ ಸುಬ್ಬಣ್ಣ ಹಾಗೂ ಬಿ.ಆರ್.ಶರ್ಮಿಳಾ ಅವರು ವಿಜೇತರಾದರು.

ಬಹುಮಾನ ಪಡೆದ ಮಹಿಳೆಯರಿಬ್ಬರಿಗೂ ₹18 ಸಾವಿರ ಮೊತ್ತದ ಚೆಕ್ ಹಾಗೂ ಟ್ರೋಫಿ ನೀಡಲಾಯಿತು. ಜೊತೆಗೆ ಐದು ಮಂದಿಗೆ ₹ 5 ಸಾವಿರ ಮೊತ್ತದ ಸಮಾಧಾನಕರ ಬಹುಮಾನವನ್ನೂ ನೀಡಲಾಯಿತು.

ಬುಧವಾರದಿಂದ ಶೇ 25ರ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳ ಮಾರಾಟ ಆರಂಭವಾಗಿದೆ. ಹಬ್ಬದ ಪ್ರಯುಕ್ತ ಅಕ್ಟೋಬರ್ 17ರವರೆಗೆ ಮಾರಾಟ ಮುಂದುವರಿಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.