ಶುಕ್ರವಾರ, ಮಾರ್ಚ್ 31, 2023
24 °C
ನೀರಿನ ಗುಣಮಟ್ಟ ಪರೀಕ್ಷಾ ಮಾನದಂಡ

ಜಿ.ಪಂ.ಗೆ ಎನ್‌ಎಬಿಎಲ್‌ ಪ್ರಮಾಣಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಅನುಸರಿಸಿರುವ ಮಾನದಂಡಗಳನ್ನು ಮೆಚ್ಚಿ, ರಾಷ್ಟ್ರೀಯ ಪರೀಕ್ಷಣಾ ಮತ್ತು ಅಂಶ ಶೋಧನಾ ಪ್ರಯೋಗಶಾಲೆಯ ಮಾನ್ಯತಾ ಮಂಡಳಿಯು (ಎನ್‌ಎಬಿಎಲ್‌) ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ಪ್ರಮಾಣ ಪತ್ರ ನೀಡಿದೆ.

‘ಈ ಪ್ರಮಾಣಪತ್ರ ಪಡೆದ ರಾಜ್ಯದ ಮೊದಲ ಜಿಲ್ಲೆ ದಕ್ಷಿಣ ಕನ್ನಡ. ಬೆಂಗಳೂರು ನಗರ ಜಿಲ್ಲೆ ಎರಡನೆಯದು’  ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂಗಪ್ಪ ತಿಳಿಸಿದ್ದಾರೆ.

‘ನೀರಿನ ಪರೀಕ್ಷೆ ವೇಳೆ 16 ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಕುಡಿಯುವ ನೀರು, ಅಂತರ್ಜಲ, ಕೊಳವೆ ಬಾವಿ ನೀರು, ಮೇಲ್ಮೈ ನೀರಿನಲ್ಲಿರುವ 16 ರೀತಿಯ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಮನೆ, ಹೊಲ, ತೋಟಗಳಲ್ಲಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವ ಸಂದರ್ಭದಲ್ಲಿ ಈ ಪರೀಕ್ಷೆಯನ್ನು ಮಾಡಿಸಬಹುದು. ಪ್ರಸ್ತುತ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯ ಪ್ರತಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ. ಅಶುದ್ಧ ಕುಡಿಯುವ ನೀರಿನಿಂದ ಬರುವ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದೂ ಹೇಳಿದ್ದಾರೆ.

ಸಾರ್ವಜನಿಕರು ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಲು ₹650 ಶುಲ್ಕ ಪಾವತಿಸಬೇಕು ಎಂದು ಸಂಗಪ್ಪ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು