ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವಹೊರವರ್ತುಲ ರಸ್ತೆ–ಕೆ.ಆರ್.ಪುರ ಮಾರ್ಗದಲ್ಲಿ (ರೀಚ್ 2ಎ) ಎಲೆಕ್ಟ್ರಿಕ್ ರಿಸೀವಿಂಗ್ ಸಬ್ ಸ್ಟೇಷನ್ (ಇಆರ್ಎಸ್ಎಸ್) ನಿರ್ಮಾಣಕ್ಕೆ 4,652 ಚ.ಮೀ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಎಂಆರ್ಸಿಎಲ್ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

‘2ಎ ರೀಚ್ನಲ್ಲಿ ಇಆರ್ಎಸ್ಎಸ್ ನಿರ್ಮಾಣಕ್ಕೆ ಈ ಭೂಮಿಯ ಅಗತ್ಯವಿತ್ತು. ಅದಕ್ಕಾಗಿ ಇತ್ತೀಚೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಲೌರಿ ಮೆಮೊರಿಯಲ್ ಸ್ಕೂಲ್ ಬಳಿಯಲ್ಲಿ, ಅಂದರೆ ಕೆ.ಆರ್.ಪುರ ಮೆಟ್ರೊ ನಿಲ್ದಾಣದ ಮುನ್ನ ಈ ಕೇಂದ್ರ ನಿರ್ಮಾಣಗೊಳ್ಳಲಿದೆ’ ಎಂದು ಬಿಎಂಆರ್ಸಿಎಲ್ನ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಪ್ಪಗೌಡರ್ ತಿಳಿಸಿದರು.

‘ಈ ರೀಚ್ಗೆ ಒಟ್ಟು 48,000 ಚ.ಮೀ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪರಿಹಾರ ಎಲ್ಲ ಪಾವತಿಸಲಾಗಿದ್ದು, ಕಟ್ಟಡಗಳನ್ನೆಲ್ಲ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗ ಹೆಚ್ಚುವರಿಯಾಗಿ 4,652 ಚ.ಮೀ ಸ್ವಾಧೀನಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಜಾಗ ಸ್ವಾಧೀನ ಪಡಿಸಿಕೊಂಡರೆ, ರೀಚ್ 2ಎ ಅಡಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ’ ಎಂದು ಅವರು ತಿಳಿಸಿದರು.

ಮಹದೇವಪುರ ಹೋಬಳಿಯ ಬಿ.ನಾರಾಯಣಪುರ ಗ್ರಾಮದಲ್ಲಿ ಈ ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ.ಸಿಲ್ಕ್ಬೋರ್ಡ್ನಿಂದ ಹೊರವರ್ತುಲ ರಸ್ತೆಯವರೆಗೆ 18.23 ಕಿ.ಮೀ ಉದ್ದದ ಮಾರ್ಗ ಈ ರೀಚ್ನಲ್ಲಿ ನಿರ್ಮಾಣವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.