ಬೆಂಗಳೂರು: ನಾಳೆಯಿಂದಲೇ (ಫೆ. 9) ‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ ಜಾರಿಗೆ ಬರಲಿದ್ದು, ಪ್ರಯಾಣಿಕರ ಜೇಬು ಮತ್ತಷ್ಟು ಭಾರವಾಗಲಿದೆ. ಶೇ 5ರಷ್ಟು ದರ ಏರಿಕೆ ಮಾಡಲಾಗಿದೆ.

ದರವು ಕನಿಷ್ಠ ₹1 ಹಾಗೂ ಗರಿಷ್ಠ ₹5ರಷ್ಟು ಹೆಚ್ಚಳ ವಾಗಲಿದೆ. ಕನಿಷ್ಠ ₹10 ಇರುವ ದರ ₹11ಕ್ಕೆ, ಗರಿಷ್ಠ ₹90 ಇರುವ ದರ ₹95ಕ್ಕೆ ಏರಲಿದೆ.
.ಮೆಟ್ರೊ ಟಿಕೆಟ್ ದರ: ಗೂಬೆ ಕೂರಿಸಲು ಹೊರಟವರ ನಿಜಾಂಶ ಬಯಲು; ದಿನೇಶ್ ಗುಂಡೂರಾವ್.
ಒಂದು ವರ್ಷದ ಹಿಂದಷ್ಟೇ ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಿಸಲಾಗಿತ್ತು.

ಬಿಎಂಆರ್ಸಿಎಲ್ ಪ್ರತಿ ವರ್ಷ ಶೇ 5ರಷ್ಟು ಪ್ರಯಾಣದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ (ಎಫ್ಎಫ್ಸಿ) 2025ರಲ್ಲಿ ಶಿಫಾರಸು ಮಾಡಿತ್ತು.

ದರ ಹೆಚ್ಚಳವೆಷ್ಟು: ಶೇ 5 ಹೆಚ್ಚಳ ಮಾಡಿದಾಗ ₹30 ದರ ಇದ್ದಿದ್ದು ₹31.5 ಆಗಬೇಕು. ಆದರೆ, ಚಿಲ್ಲರೆಗೆ ಸಮಸ್ಯೆಯಾಗಬಾರದು ಎಂದು ಪೈಸೆ ಇರುವುದನ್ನು ಹತ್ತಿರ ರೂಪಾಯಿಗೆ (ರೌಂಡ್ ಫಿಗರ್) ನಿಗದಿ ಮಾಡಲಾಗುತ್ತದೆ ಹಾಗಾಗಿ ₹32 ನೀಡಬೇಕಾಗುತ್ತದೆ.

96.10 ಕಿ.ಮೀ. ಮೆಟ್ರೊ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ₹1 ಮತ್ತು ಗರಿಷ್ಠ ₹ 5 ಹೆಚ್ಚಳ ಮಾಡಲಾಗಿದೆ.
.ಮೆಟ್ರೊ ಪ್ರಯಾಣ ದರ ಏರಿಕೆ| ತೇಜಸ್ವಿ ಸೂರ್ಯ ದೆಹಲಿಗೆ ಓಡಿದ್ದು ಏಕೆ?: ಕಾಂಗ್ರೆಸ್.
ಬಿಎಂಆರ್ಸಿಎಲ್ ಸ್ಮಾರ್ಟ್ಕಾರ್ಡ್, ಎನ್ಸಿಎಂಸಿ ಬಳಕೆದಾರರಿಗೆ ರಿಯಾಯಿತಿ ಮುಂದುವರಿಯಲಿದೆ.

ದಟ್ಟಣೆ ಅವಧಿಯಲ್ಲಿ ಶೇ 5, ದಟ್ಟಣೆ ಅಲ್ಲದ ಅವಧಿಯಲ್ಲಿ ಶೇ 10 ಹಾಗೂ ಭಾನುವಾರ ಮತ್ತು ಗೊತ್ತುಪಡಿಸಿದ ಮೂರು ರಾಷ್ಟ್ರೀಯ ರಜಾದಿನಗಳಲ್ಲಿ

ಶೇ 10 ರಿಯಾಯಿತಿ ದೊರೆಯಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ತಿಳಿಸಿದೆ.

ಬೆಲೆ ಹೆಚ್ಚಳವು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೂ ಕಾರಣವಾಗಿತ್ತು.
.ಮೆಟ್ರೊ: ಹೊಸ ಎಫ್ಎಫ್ಸಿ ರಚನೆಗೆ ಅಶೋಕ ಒತ್ತಾಯ.
ತಾತ್ಕಾಲಿಕವಾಗಿ ತಡೆ ಎಂದಿದ್ದ ಸಂಸದ ಸೂರ್ಯ

ಮೆಟ್ರೊ ಪ್ರಯಾಣದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ. ಕೇಂದ್ರ ನಗರ ವ್ಯವಹಾರಗಳ ಸಚಿವ ಮನೋಹರ ಲಾಲ್ ಖಟ್ಟರ್ ಅವರು ಈ ಸೂಚನೆ ನೀಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಸಿದ್ದರು. ಆದರೂ ನಾಳೆಯಿಂದಲೇ ಹೊಸ ದರ ಜಾರಿಗೆ ಬರಲಿದೆ.
.ದೇಶದಲ್ಲೇ ‘ನಮ್ಮ ಮೆಟ್ರೊ’ ದರ ದುಬಾರಿ: ತೇಜಸ್ವಿ ಸೂರ್ಯ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.