ಬೆಂಗಳೂರು: ಪ್ರಯಾಣಿಕರಿಂದ ಬಂದ ಕೋರಿಕೆಯನ್ನು ಮನ್ನಿಸಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ನಮ್ಮ ಮೆಟ್ರೊ ಸೇವೆಯನ್ನು ರಾತ್ರಿ 11 ಗಂಟೆವರೆಗೂ ವಿಸ್ತರಿಸಿದೆ.

ನಗರದ ಎಲ್ಲ ಮೆಟ್ರೊ ಟರ್ಮಿನಲ್ ನಿರ್ಲಾಣಗಳಲ್ಲಿ ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಗೆ ದಿನದ ಮೊದಲ ಮೆಟ್ರೊ ರೈಲು ಸಂಚಾರ ಆರಂಭಿಸಲಿದೆ. ಭಾನುವಾರ ಮೊದಲ ರೈಲು ಬೆಳಿಗ್ಗೆ 7ಕ್ಕೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ದಿನದ ಕೊನೆಯ ರೈಲು ರಾತ್ರಿ 11 ಗಂಟೆಗೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಇಂಟರ್ಚೇಂಜ್ ನಿಲ್ದಾಣದಿಂದ ಕೊನೆಯ ರೈಲುಗಳು ರಾತ್ರಿ 11.30ಕ್ಕೆ ಹೊರಡಲಿವೆ.

ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂವನ್ನು ಸರ್ಕಾರ ಹಿಂಪಡೆದಿದೆ. ವ್ಯಾಪಾರ ವಹಿವಾಟುಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಅಂಗಡಿ ಮಳಿಗೆಗಳು ತಡ ರಾತ್ರಿವರೆಗೂ ಮುಂದುವರಿಯುತ್ತಿವೆ. ಕೋವಿಡ್ ಲಾಕ್ಡೌನ್ ವೇಳೆ ಬಾಗಿಲು ಮುಚ್ಚಿದ್ದ ಕಚೇರಿಗಳೂ ಪುನರಾರಂಭಗೊಂಡಿವೆ. ಕಾಸ್ಮೋಪಾಲಿಟನ್ ನಗರದ ‘ನೈಟ್ ಲೈಫ್’ ಸಂಸ್ಕೃತಿ ಮತ್ತೆ ಜೀವಕಳೆ ಪಡೆಯುತ್ತಿದೆ. ಹಾಗಾಗಿ ನಮ್ಮ ಮೆಟ್ರೊ ಸೇವೆಯ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು. ಇಂತಹ ಸಂದರ್ಭದಲ್ಲಿ ಮಧ್ಯ ರಾತ್ರಿವರೆಗೂ ಮೆಟ್ರೊ ರೈಲು ಸೇವೆ ಲಭ್ಯ ಇರಬೇಕು ಎಂಬ ಕೂಗೆದ್ದಿತ್ತು.

‘ಸಾರ್ವಜನಿಕರಿಂದ ಬೇಡಿಕೆ ಬಂದಿದ್ದರಿಂದ ರಾತ್ರಿ ವೇಳೆ ಮೆಟ್ರೊ ವಾಣಿಜ್ಯ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ. ರಾತ್ರಿ ಕರ್ಫ್ಯೂ ಹಿಂಪಡೆದ ಬಳಿಕ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ರಾತ್ರಿ ಮೆಟ್ರೊ ಸೇವೆ ವಿಸ್ತರಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಳವಾಗಲಿದೆ ಎಂಬ ವಿಶ್ವಾಸ ಇದೆ’ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.