ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಯೋಜನೆ; ಮತ್ತೆ ಸುರಂಗ ಕೊರೆಯಲು ಶುರು ಮಾಡಿದ ವರದಾ

Last Updated 29 ಜನವರಿ 2022, 1:39 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ಯೋಜನೆಯ ಎರಡನೇ ಹಂತದ ಸುರಂಗ ನಿರ್ಮಾಣ ಕಾಮಗಾರಿಗೆ ಬಳಸಲಾಗುತ್ತಿರುವ ವರದಾ ಯಂತ್ರವು (ಟಿಬಿಎಂ) ರಾಷ್ಟ್ರೀಯ ಮಿಲಿಟರಿ ಶಾಲೆಯ ಬಳಿಯಿಂದ ಸುರಂಗ ಕೊರೆಯುವ ಕಾರ್ಯವನ್ನು ಗುರುವಾರ ಮತ್ತೆ ಆರಂಭಿಸಿದೆ.

ವರದಾ ಯಂತ್ರವನ್ನು ಬಳಸಿ ರಾಷ್ಟೀಯ ಮಿಲಿಟರಿ ಶಾಲೆಯಿಂದ (ವೆಲ್ಲಾರ) ಲ್ಯಾಂಗ್‌ಪೋರ್ಡ್‌ ಟೌನ್ ನಿಲ್ದಾಣದವರೆಗೆ 594 ಮೀ ಉದ್ದದ ಸುರಂಗ ಕೊರೆಯಲಾಗಿತ್ತು. 2021ರ ಮಾರ್ಚ್‌ 12ರಂದು ಆರಂಭವಾಗಿದ್ದ ಈ ಕಾಮಗಾರಿ 2021ರ ನ. 11ರಂದು ಪೂರ್ಣಗೊಂಡಿತ್ತು. ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ (ವೆಲ್ಲಾರ ) ಲ್ಯಾಂಗ್‌ಫೋರ್ಡ್‌ ಟೌನ್‌ ನಿಲ್ದಾಣದವರೆಗಿನ ಇನ್ನೊಂದು ಸುರಂಗವನ್ನು ನಿರ್ಮಿಸುವುದಕ್ಕೂ ಇದೇ ಯಂತ್ರವನ್ನು ಬಳಸಲಾಗುತ್ತಿದೆ.ಈ ಯಂತ್ರವನ್ನು ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ. ಇದು 5.80 ಮೀ ವ್ಯಾಸದ ಸುರಂಗವನ್ನು ನಿರ್ಮಿಸುತ್ತಿವೆ.

ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಗೊಟ್ಟಿಗೆರೆ– ನಾಗವಾರವರೆಗಿನ21.25 ಕಿ.ಮೀ ಉದ್ದದ ಮಾರ್ಗದಲ್ಲಿ ( ರೀಚ್‌ –6 ) ಡೇರಿ ವೃತ್ತದಿಂದ ನಾಗವಾರದವರೆಗೆ 13.76 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲೇ ಅತಿ ಉದ್ದದ ಮೆಟ್ರೊ ಸುರಂಗ ಮಾರ್ಗ. ಒಟ್ಟು 9 ಯಂತ್ರಗಳು ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿವೆ. ಪ್ರತಿ ದಿನ ಸರಾಸರಿ 3.5 ಮೀ. ಉದ್ದದಷ್ಟು ಸುರಂಗ ಕೊರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT