ಪಿಎಸ್‌ಡಿ ಅಳವಡಿಸಲು ಸಂಸದ ಪತ್ರ
ಹಳದಿ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ನಿಲ್ದಾಣಗಳಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಮೆಟ್ರೊ ಬಂದಾಗ ತೆರೆದುಕೊಂಡು ಮೆಟ್ರೊ ಮುಂದಕ್ಕೆ ಚಲಿಸಿದ ಕೂಡಲೇ ಮುಚ್ಚುವ ತಂತ್ರಜ್ಞಾನದ ಪ್ಲಾಟ್‌ಫಾರಂ ಸ್ಕೀನಿಂಗ್ ಡೋರ್ (ಪಿಎಸ್‌ಡಿ) ಅಳವಡಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹಳದಿ ಮಾರ್ಗದಲ್ಲಿ ಪಿಎಸ್‌ಡಿ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಪಿಎಸ್‌ಡಿ ಇಲ್ಲದಿದ್ದರೆ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ಪ್ರತಿಕ್ರಿಯಿಸಿದರು.