ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗೆ ಜಾತಿ ಮಾನದಂಡ ಆಗದಿರಲಿ: ಸಾಣೆಹಳ್ಳಿ ಸ್ವಾಮೀಜಿ

Published 11 ಫೆಬ್ರುವರಿ 2024, 14:04 IST
Last Updated 11 ಫೆಬ್ರುವರಿ 2024, 14:04 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಫಾರಸು, ಜಾತಿ, ಒತ್ತಡಗಳು ಪ್ರಶಸ್ತಿ ಆಯ್ಕೆಗೆ ಮಾನದಂಡ ಆಗಬಾರದು’ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. 

ತೊ. ನಂಜುಂಡಸ್ವಾಮಿ ಗೆಳೆಯರ ಬಳಗ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಟಕಕಾರ ಹೂಲಿ ಶೇಖರ್ ಅವರಿಗೆ ತೊ.ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು. 

‘ಪ್ರಶಸ್ತಿಗಳನ್ನು ನೀಡುವಾಗ ವ್ಯಕ್ತಿಯ ಸಾಧನೆಗಳನ್ನು ಮಾತ್ರ ಗುರುತಿಸಬೇಕು. ಆದರೆ, ಬದಲಾದ ಸನ್ನಿವೇಶದಲ್ಲಿ ಶಿಫಾರಸು, ಒತ್ತಡಗಳಿಗೆ ಮಣಿದು, ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇಂತಹ ವಾತಾವರಣದಲ್ಲಿಯೂ ಸಾಧನೆಗೆ ಆದ್ಯತೆ ನೀಡಿ, ಅರ್ಹರನ್ನು ಗೌರವಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ತೊ. ನಂಜುಂಡಸ್ವಾಮಿ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳಲ್ಲಿ ಅವರ ಸಾಂಸ್ಕೃತಿಕ ಚಟುವಟಿಕೆಗಳನ್ನು ಸ್ಮರಿಸಿಕೊಂಡ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್, ‘ತೊ. ನಂಜುಂಡಸ್ವಾಮಿ ಅವರು ಹಣದ ಹಿಂದೆ ಹೋಗದೆ ಜನರನ್ನು ಸಂಪಾದನೆ ಮಾಡಿದ ಹೃದಯ ಶ್ರೀಮಂತ. ರಂಗ ಕಲಾವಿದರ ಆರೋಗ್ಯ ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು’ ಎಂದು ಹೇಳಿದರು. 

ರಂಗಕರ್ಮಿಗಳಾದ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ಬಿ. ಸುರೇಶ್ ಅವರು ಹೂಲಿ ಶೇಖರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT