ಬೆಂಗಳೂರು: ‘ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಕಲುಷಿತಗೊಂಡಿರುವ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳು ಕ್ಷೋಭೆಗೆ ಒಳಗಾಗಿವೆ. ಇಂತಹ ಸಂದರ್ಭದಲ್ಲಿ ಆತಂಕದಲ್ಲಿರುವ ಸಮಾಜಕ್ಕೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಿಚಾರಗಳು ಸನ್ಮಾರ್ಗಗಳನ್ನು ತೋರಿಸಬಲ್ಲವು’ ಎಂದು ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

‘ಕನ್ನಡದ ಸುಮನಸುಗಳು ಒಂದುಗೂಡಿ ಸಾಹಿತ್ಯ, ಸಂಸ್ಕೃತಿಗಳ ಚರ್ಚೆ, ಚಟುವಟಿಕೆಗಳನ್ನು ನಡೆಸುತ್ತಾ ಕೊಲೆ, ಸುಲಿಗೆ, ದುರಭ್ಯಾಸಗಳಿಂದ ಹದಿಹರೆಯದವರಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಮನಸ್ಥಿತಿಯ ವಾತಾವರಣವನ್ನು ತಿಳಿಗೊಳಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯುವಜನರಿಗೆ ಕನ್ನಡ ಸಾಹಿತ್ಯದ ಓದಿಗೆ ಪೂರಕವಾಗುವಂತ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಕರೆ ನೀಡಿದರು.

ಕೆಂಗೇರಿ ಉಪನಗರದ, ಉಲ್ಲಾಳದ ಭುವನೇಶ್ವರಿ ನಗರದ ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯ ನಿವಾಸಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ವಾಸಿಸುತ್ತಿರುವ ಮನೆಯ ರಸ್ತೆಗೆ ‘ಡಾಕ್ಟರ್ ನರಹಳ್ಳಿ ಬಾಲಸುಬ್ರಹ್ಮಣ್ಯ ರಸ್ತೆ’ ಎಂಬ ಹೆಸರಿನ ನಾಮಫಲಕವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್ ಅನಾವರಣ ಮಾಡಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಮಾತನಾಡಿ, ಕನ್ನಡದ ಸಾಹಿತಿಗಳ ಹೆಸರನ್ನು ಮತ್ತು ಅವರ ಸಾಹಿತ್ಯದ ಸಂದೇಶಗಳನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಸುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದು ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಎಚ್.ಎಸ್.ಸುಧೀಂದ್ರ ಕುಮಾರ್ ಮಾತನಾಡಿ, ಪರಿಷತ್ ಚಟುವಟಿಕೆಗಳಿಗೆ ಒಂದು ಕನ್ನಡ ಭವನ ನಿರ್ಮಾಣ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ರಜನಿ ನರಹಳ್ಳಿ, ಡಾ.ವಸುಂಧರಾ ಭೂಪತಿ, ಅಭಿನವ ರವಿಕುಮಾರ್, ಸುರೇಶ್ ನರಹಳ್ಳಿ, ಹೊನ್ನೇಶ್ ನರಹಳ್ಳಿ, ಪುಷ್ಪಾ ದೇವರಾಜ್, ಚೇತನ್ ಕುಮಾರ್, ವಿಕ್ಟೋರಿಯಾ ವೀರನಾಗಪ್ಪ, ಹಾಪ್ ಕಾಮ್ಸ್ ಮಹೇಶ್, ಮೈಕೋ ಶ್ರೀರಾಮತೀರ್ಥ, ಪರಿಷತ್ನ ವಿ.ವಿ.ಸತ್ಯನಾರಾಯಣ, ಎ.ಎನ್.ಶಿವಸ್ವಾಮಿ, ಬಿ.ಎಸ್.ಪಾರಿಜಾತ, ಆಶಾ ಹೆಗಡೆ, ಡಾ.ಎಸ್.ತಿಮ್ಮಯ್ಯ, ಮಾಗಡಿ ಗಿರೀಶ್, ಸಿ.ಮುನಿಕೃಷ್ಣ, ಎಂ.ನಾಗೇಶ್, ಆದೂರು ಪ್ರಕಾಶ್, ವರ್ಧಮಾನ ಕಳಸೂರು, ಹನುಮಂತ ಪಿ. ಶೆಟ್ಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.