ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯಕ್ಕಾಗಿ ಧರ್ಮದ ಸಮಸ್ಯೆ ಮುನ್ನೆಲೆಗೆ’

ವಿಮರ್ಶಕ ಎಚ್‌.ಎಸ್. ರಾಘವೇಂದ್ರ ರಾವ್ ಬೇಸರ
Last Updated 21 ಮೇ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಧರ್ಮ, ಜಾತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು, ನೈಜ ಸಮಸ್ಯೆಗಳನ್ನು ಮರೆಮಾಚುವ ಕೆಲಸ ಮಾಡುತ್ತಿವೆ’ ಎಂದು ವಿಮರ್ಶಕ ಎಚ್‌.ಎಸ್. ರಾಘವೇಂದ್ರ ರಾವ್ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಮತ್ತು ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಜಂಟಿಯಾಗಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ‘ಕನ್ನಡ ಪ್ರಗತಿಶೀಲ ಘಟ್ಟ ಮತ್ತು
ಬಸವರಾಜ ಕಟ್ಟೀಮನಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ರಾಜಕೀಯ ಪಕ್ಷಗಳು ಜನರನ್ನು ಮರುಳು ಮಾಡಿ, ಆರ್ಥಿಕ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳುತ್ತಿವೆ’ ಎಂದರು.

‘ಪ್ರಗತಿಶೀಲತೆ ಎಲ್ಲ ಕಾಲದ ಗುಣ ಆಗಿರಬೇಕು. ಆದರೆ, ಈಚಿನ 20 ವರ್ಷಗಳಲ್ಲಿ ಪ್ರಗತಿಶೀಲತೆ ಇಲ್ಲವಾಗಿದೆ. ಕಟ್ಟೀಮನಿ ಅವರು ಕಾದಂಬರಿ ಬರೆದಾಗ ಅನಕ್ಷರತೆಯಿಂದಾಗಿ ಕೆಲವರಿಗೆ ಅದನ್ನು ಓದಲು ಸಾಧ್ಯವಾಗಲಿಲ್ಲ.ಅಕ್ಷರಸ್ಥರು ಓದಲು ಪ್ರಾರಂಭಿಸಿದಾಗ ಕೃತಿಗಳು ದೊರೆಯದಂತೆ ಪಿತೂರಿ ಮಾಡಲಾಯಿತು’ ಎಂದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಪ್ರಗತಿಶೀಲ ಕಾಲಘಟ್ಟ ಈ ಸಮಾಜದ ಮೇಲೆ ಮಹತ್ವದ ಪರಿಣಾಮ ಬೀರಿದೆ. ಈ ಕಾಲಘಟ್ಟ ಮೌನಕ್ಕೆ ಮಾತು ಕೊಟ್ಟಿತು. ಸ್ವಾತಂತ್ರ್ಯೋತ್ತರ ಬೆಳವಣಿಗೆ ಹಾಗೂ ಸ್ವಾತಂತ್ರ್ಯ ಪೂರ್ವದ ಆಶಯಗಳು ಇದಕ್ಕೆ ಪ್ರಮುಖ ಕಾರಣ. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಕೃತಿಗಳ ಪುಸ್ತಕ ಮಾಲೆಯನ್ನು ಸರ್ಕಾರ ಹೊರತರಬೇಕು. ಯುವಪೀಳಿಗೆ ಅದನ್ನು ಓದುವಂತಾಗಬೇಕು’ ಎಂದರು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಕಾರ್ಯದರ್ಶಿಪ್ರೊ.ಎಸ್‌.ಎನ್. ನಾಗರಾಜರೆಡ್ಡಿ, ‘ಇವತ್ತಿನ ಕಾಲಘಟ್ಟದಲ್ಲಿ ಪ್ರಗತಿಶೀಲ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕಿದೆ. ಈಗಿನ ಸನ್ನಿವೇಶ ನೋಡಿದರೆ ಸಮಾಜ ವಿನಾಶದತ್ತಸಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT