ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ನಾಲ್ವರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ

Published 27 ಆಗಸ್ಟ್ 2024, 16:10 IST
Last Updated 27 ಆಗಸ್ಟ್ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಶಿಕ್ಷಣ ಮತ್ತು ಸಾಕ್ಷರತಾ ಸಚಿವಾಲಯ 50 ಶಿಕ್ಷಕರನ್ನು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಮಂಗಳವಾರ ಆಯ್ಕೆ ಮಾಡಿದ್ದು, ಕರ್ನಾಟಕದ ನಾಲ್ವರು  ಭಾಜನರಾಗಿದ್ದಾರೆ. 

ಬೆಂಗಳೂರಿನ ಸಂಜಯನಗರದ ಡಫೋಡಿಲ್ಸ್ ಇಂಗ್ಲಿಷ್‌ ಶಾಲೆಯ ಎಚ್‌.ಕೆ. ನರಸಿಂಹ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಲ್ಲಸಂದ್ರ–ಕಮ್ಮಗೊಂಡನಹಳ್ಳಿ ಕೇಂದ್ರೀಯ ವಿದ್ಯಾಲಯದ ಅಶೋಕ್‌ ಸೇನ್‌ಗುಪ್ತಾ, ಮೈಸೂರು ಜಿಲ್ಲೆ ಹುಣಸೂರಿನ ಸರ್ಕಾರಿ ಪಿಯು ಕಾಲೇಜಿನ ಎಚ್‌.ಎನ್‌. ಗಿರೀಶ್‌, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಆರ್‌. ನಾರಾಯಣಸ್ವಾಮಿ ಅವರಿಗೆ ಪ್ರಶಸ್ತಿ ಒಲಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT