ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಸರ್ಗದ ಯಾವ ಸೃಷ್ಟಿಗೂ ಗಡಿ ಇಲ್ಲ: ವಿಜ್ಞಾನ ಲೇಖಕ ನಾಗೇಶ ಹೆಗಡೆ

ವಿಜ್ಞಾನ ಲೇಖಕ ನಾಗೇಶ ಹೆಗಡೆ ಅಭಿಮತ
Published : 4 ಆಗಸ್ಟ್ 2024, 15:41 IST
Last Updated : 4 ಆಗಸ್ಟ್ 2024, 15:41 IST
ಫಾಲೋ ಮಾಡಿ
Comments

ಪೀಣ್ಯ ದಾಸರಹಳ್ಳಿ: ‘ಪ್ರಕೃತಿಯನ್ನು ಉಳಿಸಿಕೊಳ್ಳಲು ಗಾಂಧಿ ಮಾದರಿಯ ಬದುಕು ಒಂದೇ ನಮಗಿರುವ ಸರಿಯಾದ ಮಾರ್ಗ‘ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.

ನಗರದ ಹಾವನೂರು ಬಡಾವಣೆಯಲ್ಲಿ ‘ಪರಸ್ಪರ– ಎಂಟನೇ ಮೈಲಿ’ ವೇದಿಕೆ ಹಾಗೂ ಭೂಮಿಕಾ ಸೇವಾ ಫೌಂಡೇಷನ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಲೋಕಲ್ ಆಚೆಗಿನ ಲೋಕ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

’ಹಲವರು ಪ್ರಕೃತಿಯ ಪ್ರತಿ ಅಂಶವನ್ನು ಹಣದ ಲೆಕ್ಕಾಚಾರದಲ್ಲಿ ನೋಡುತ್ತಿದ್ದಾರೆ. ಇದರಿಂದ ಲೆಕ್ಕವಿಲ್ಲದಷ್ಟು ಪ್ರಾಕೃತಿಕ ದುರಂತಗಳು ಸಂಭವಿಸುತ್ತಿವೆ. ನಿಸರ್ಗದ ಶಕ್ತಿಯ ಎದುರು ಇವೆಲ್ಲ ನಡೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಅವರು ಎಚ್ಚರಿಸಿದರು.

‌'ಪ್ರಯೋಗ ಮಾಡುತ್ತಾ ಮಾಡುತ್ತಾ ಒಂದೊಂದೇ ಜೀವಿಯನ್ನು ಸೃಷ್ಟಿ ಮಾಡಿದ ನಿಸರ್ಗ, ತನ್ನ ಯಾವ ಸೃಷ್ಟಿಗೂ ಗಡಿಯನ್ನು ಹಾಕಿಕೊಂಡಿರಲಿಲ್ಲ. ಆದರೆ ಮನುಷ್ಯ ಗಡಿಗಳನ್ನು ಹಾಕಲು ಪ್ರಾರಂಭಿಸಿದಾಗ ಭೂಮಿ ನಲುಗುತ್ತಾ ಹೋಯಿತು' ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಗುರುರಾಜ ಎಸ್. ದಾವಣಗೆರೆ, ಜಾನಪದ ಪರಿಷತ್ತಿನ ಅಧ್ಯಕ್ಷ ವೈ.ಬಿ.ಹೆಚ್ ಜಯದೇವ್, ಕಥೆಗಾರ ಕಂನಾಡಿಗಾ ನಾರಾಯಣ, ಸುಧಾ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ, ಲೇಖಕಿಯರಾದ ಮಮತಾ ವಾರನಹಳ್ಳಿ, ಭಾರತಿ ಕೊಕಲೆ, ಫೌಂಡೇಷನ್ ಅಧ್ಯಕ್ಷೆ ಲತಾ ಕುಂದರಗಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT