ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಮಾರಾಟ: ನೈಜೀರಿಯಾ ಪ್ರಜೆ ಸೇರಿ ನಾಲ್ವರ ಬಂಧನ

Last Updated 19 ಜನವರಿ 2022, 17:04 IST
ಅಕ್ಷರ ಗಾತ್ರ

ಬೆಂಗಳೂರು:ಮಾದಕ ವಸ್ತು ಮಾರಾಟ ಜಾಲ ಬೇಧಿಸಿರುವ ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು 84 ಗ್ರಾಂ ಕೊಕೇನ್‌, 40 ಗ್ರಾಂ ಎಂಡಿಎಂಎ, ಹಶೀಶ್‌ ಹಾಗೂ ಗಾಂಜಾ ಜಪ್ತಿ ಮಾಡಿದ್ದಾರೆ. ನೈಜೀರಿಯಾದ ಪ್ರಜೆ ಹಾಗೂ ಚೆನ್ನೈನ ಮೂವರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

‘ಬಂಧಿತ ನೈಜೀರಿಯಾದ ಪ್ರಜೆ ಡ್ರಗ್ಸ್‌ ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದ. ಪೆಡ್ಲರ್‌ಗಳು ಈತನಿಂದ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದರು. ಅದನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ ಅಲ್ಲಿನ ಹೋಟೆಲ್‌, ಪಬ್‌ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು. ಚೆನ್ನೈನ ಪೆಡ್ಲರ್‌ಗಳು ನೈಜೀರಿಯಾದ ಪ್ರಜೆಯಿಂದ ಮಾದಕ ವಸ್ತು ಖರೀದಿಸಲು ಎಲೆಕ್ಟ್ರಾನಿಕ್‌ ಸಿಟಿಗೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ ನಾಲ್ವರನ್ನೂ ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ನೈಜೀರಿಯಾದ ಪ್ರಜೆಯು ವಿವಿಧ ಮಾದಕ ವಸ್ತುಗಳನ್ನು ಮಿಶ್ರಣ ಮಾಡಿ ಸೇವಿಸುವುದರ ಬಗ್ಗೆ ಖರೀದಿದಾರರಿಗೆ ಮಾಹಿತಿ ನೀಡುತ್ತಿದ್ದ. ಹಾಗೆ ಸೇವಿಸುವುದರಿಂದ ‘ನಶೆ’ ಹೆಚ್ಚಿಸಿಕೊಳ್ಳಬಹುದು ಎಂದೂ ತಿಳಿಸುತ್ತಿದ್ದ. ಬಂಧಿತ ಮೂವರು ಪೆಡ್ಲರ್‌ಗಳು ತಮಿಳುನಾಡಿನ ವಿವಿಧ ಭಾಗಗಳಿಗೆ ಡ್ರಗ್ಸ್‌ ಮಾರುತ್ತಿದ್ದರು. ಇವರ ವಿರುದ್ಧ ಅಲ್ಲಿನ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಹಾಗೂ ಕೇರಳದಲ್ಲಿ ಎನ್‌ಡಿಪಿಎಸ್‌ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT