ಬೆಂಗಳೂರು: ನಗರದಲ್ಲಿ ಆಗಸ್ಟ್ ತಿಂಗಳಮೊದಲ ಹತ್ತು ದಿನಗಳಲ್ಲಿ 499 ಮಕ್ಕಳಲ್ಲಿ ಕೋವಿಡ್ -19 ದೃಢಪಟ್ಟಿದ್ದು, ಪೋಷಕರಲ್ಲಿ ಆತಂಕಕ್ಕೆ ಎಡೆಮಾಡಿದೆ ಎಂದು ಸುದ್ದಿ ಸಂಸ್ಥೆಐಎಎನ್‌ಎಸ್ ವರದಿ ಮಾಡಿದೆ.

ಹೆಲ್ತ್ ಬುಲೆಟಿನ್ ಪ್ರಕಾರ, 9 ವರ್ಷದೊಳಗಿನ ಸುಮಾರು 88 ಮಕ್ಕಳು ಮತ್ತು 10 ರಿಂದ 19 ವರ್ಷದೊಳಗಿನ 305 ಮಂದಿ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

499 ಪ್ರಕರಣಗಳ ಪೈಕಿ, ಕಳೆದ ಐದು ದಿನಗಳಲ್ಲಿ 263 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 88 ಪ್ರಕರಣಗಳು 9 ವರ್ಷದೊಳಗಿನವರಾಗಿದ್ದರೆ, 175 ಪ್ರಕರಣ 10 ರಿಂದ 19 ವರ್ಷ ವಯಸ್ಸಿನವರಾಗಿದ್ದಾರೆ.

ಇದನ್ನೂ ಓದಿ..ಮಿದುಳಿನ ಮೇಲೆ ಕೋವಿಡ್ ಹೇಗೆ ಪರಿಣಾಮ ಬೀರುತ್ತದೆ? ನರವಿಜ್ಞಾನಿಗಳು ಏನಂತಾರೆ?

ಆರೋಗ್ಯ ಇಲಾಖೆಯು ಈ ಬೆಳವಣಿಗೆಯನ್ನು ಆತಂಕಕಾರಿ ಸನ್ನಿವೇಶವೆಂದು ಪರಿಗಣಿಸಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಈಗಾಗಲೇ ಕಠಿಣ ಕ್ರಮಗಳನ್ನು ಆರಂಭಿಸಿದೆ.

ಮುಂಬರುವ ಕೆಲವು ವಾರಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆಯ ಮೂಲಗಳು ವಿವರಿಸುತ್ತವೆ.

ಪೋಷಕರಿಗೆ ತಾವು ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಲಾಗಿದ್ದು, ಮಕ್ಕಳ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಜನದಟ್ಟಣೆಯ ಸ್ಥಳಗಳಿಂದ ಮಕ್ಕಳನ್ನು ದೂರ ಇಡುವಂತೆ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.