ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪ್ರೆಗಾ ನ್ಯೂಸ್‌ ಶ್ರೇಣಿಯ ನೂತನ ಉತ್ಪನ್ನ ಬಿಡುಗಡೆ

Published 4 ಜೂನ್ 2024, 0:12 IST
Last Updated 4 ಜೂನ್ 2024, 0:12 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್‌ನ ಗರ್ಭಧಾರಣೆ ಪತ್ತೆ ಕಾರ್ಡ್‌ ‘ಪ್ರೆಗಾ ನ್ಯೂಸ್‌’ ಉತ್ಪನ್ನದ ನೂತನ ಬ್ರ್ಯಾಂಡ್ ರಾಯಭಾರಿ, ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ ಅವರು ‘ಎಕ್ಸ್‌ಪರ್ಟ್ಸ್‌ ಪ್ರೆಗ್ನೆನ್ಸಿ ಕೇರ್‌ ಸಲ್ಯೂಶನ್‌’ ಶ್ರೇಣಿಯ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಗರ್ಭ ಧರಿಸುವ ಫಲವತ್ತಾದ ದಿನ ಗುರುತಿಸುವ ‘ಓವಾ ನ್ಯೂಸ್‌ ಓವಲೇಶನ್‌ ಡಿಟೆಕ್ಷನ್‌ ಕಿಟ್‌’, ಗರ್ಭಧಾರಣೆಗೆ ಮುನ್ನ ದೇಹಕ್ಕೆ ಅಗತ್ಯ ಇರುವ ಕಬ್ಬಿಣ ಮತ್ತು ಫಾಲಿಕ್‌ ಆಮ್ಲ ಅಂಶ ಹೊಂದಿರುವ ‘ಪ್ರೆಗಾ ಹೋಪ್‌ ಪ್ರೀ ಕನ್ಸೆಪ್ಷನ್‌ ಟ್ಯಾಬ್ಲೆಟ್‌’, ಫಲವತ್ತತೆ ಹೆಚ್ಚಿಸಲು ದಂಪತಿಗೆ ನೆರವಾಗುವ ‘ಪ್ರೆಗಾ ಹೋಪ್‌ ಫರ್ಟಿಲಿಟಿ ಲೂಬ್ರಿಕೆಂಟ್‌’ ಉತ್ಪನ್ನಗಳನ್ನು ಕಾಜಲ್‌ ಅಗರ್‌ವಾಲ್‌ ಏಕಕಾಲದಲ್ಲಿ ಅನಾವರಣಗೊಳಿಸಿದರು.

‘ಪ್ರೆಗಾ ನ್ಯೂಸ್‌’ ಮತ್ತು ‘ಪ್ರೆಗಾ ನ್ಯೂಸ್‌ ಅಡ್ವಾನ್ಸ್‌’ ಗರ್ಭಧಾರಣೆ ಪರೀಕ್ಷೆ ಕಿಟ್‌ ಆಗಿದೆ. ‘ಪ್ರೆಗಾ ನ್ಯೂಸ್‌ ವ್ಯಾಲ್ಯೂ ಪ್ಯಾಕ್‌’ ಎರಡು ಮಾದರಿಯ ಗರ್ಭಧಾರಣೆ ಪರೀಕ್ಷಾ ಕಿಟ್‌ ಒಳಗೊಂಡಿದೆ. ‘ಪ್ರೆಗಾ ಹ್ಯಾಪಿ ಆ್ಯಂಟಿ ಸ್ಪ್ರೆಚ್‌ ಮಾರ್ಕ್‌ ಕ್ರೀಂ’ ಉತ್ಪನ್ನ ಪ್ರಸವಪೂರ್ವ ಮತ್ತು ಗರ್ಭಧಾರಣೆ ನಂತರದ ಹಂತದಲ್ಲಿ ಗುರುತು, ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಚೆನ್ನೈ, ಹೈದರಾಬಾದ್‌, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಬಂದಿದ್ದ 70ಕ್ಕೂ ಅಧಿಕ ತಾಯಂದಿರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಟಿಯರಾದ ಮೇಘನಾರಾಜ್‌, ಸಂಜನಾ ಗಲ್ರಾನಿ, ಲಾಸ್ಯ ಮಂಜುನಾಥ್‌, ನಿಶಾ ಅಗರ್‌ವಾಲ್‌ ಭಾಗವಹಿಸಿದ್ದರು.

ಗರ್ಭಾವಸ್ಥೆಗೆ ಅಗತ್ಯವಿರುವ ಉತ್ಪನ್ನಗಳನ್ನು ಒದಗಿಸುವ ಕುರಿತು ಪ್ರೆಗಾ ನ್ಯೂಸ್‌ ಸಲಹೆ ನೀಡುತ್ತದೆ. ಈ ಬ್ರ್ಯಾಂಡ್ ಮೂರು ವರ್ಷಗಳಿಂದ ದಕ್ಷಿಣ ಮಾರುಕಟ್ಟೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಇದರ ಪರಿಣಾಮವಾಗಿ ಕರ್ನಾಟಕದಂತಹ ಮಾರುಕಟ್ಟೆಗಳಲ್ಲಿ 2022ರಲ್ಲಿ ಶೇ 65 ಬೆಳವಣಿಗೆಯಾಗಿತ್ತು. 2024ರ ಮಾರ್ಚ್‌ ಅಂತ್ಯಕ್ಕೆ ಶೇ 85ಕ್ಕೆ ಏರಿಕೆಯಾಗಿದೆ. 

ಪ್ರೆಗ್‌ ನ್ಯೂಸ್‌ ನಿಖರವಾದ ಫಲಿತಾಂಶಗಳನ್ನು ನೀಡಲು ಹೆಸರುವಾಸಿಯಾಗಿದೆ ಮತ್ತು ಉತ್ಪಾದನಾ ವಿಸ್ತರಣೆಯೊಂದಿಗೆ, ಸಮಗ್ರ ಸಂತಾನೋತ್ಪತ್ತಿ ಶ್ರೇಣಿಯನ್ನು ಒದಗಿಸುತ್ತದೆ. ಗರ್ಭಪೂರ್ವ, ಗರ್ಭಸಮಯ ಮತ್ತು ಗರ್ಭಾವಸ್ಥೆಯ ನಂತರದ ಹಂತಗಳಿಗೆ ಸಮಗ್ರ ಗರ್ಭಧಾರಣೆಯ ಆರೈಕೆಯ ಪರಿಹಾರವನ್ನು ನೀಡುತ್ತದೆ. ಇದು ವರ್ಷಗಳ ಸಂಶೋಧನೆಯ ನಂತರ ಅಭಿವೃದ್ಧಿಪಡಿಸಿದ ಆರು ಚಿಂತನಶೀಲ ಉತ್ಪನ್ನಗಳನ್ನು ಒಳಗೊಂಡಿದೆ ಎಂದು ಸಂಸ್ಥೆಯವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT