ಮಂಗಳವಾರ, ಫೆಬ್ರವರಿ 18, 2020
24 °C
ಸಿಪಿಆರ್‌ಐ ವಜ್ರಮಹೋತ್ಸವ ಸಂಭ್ರಮ

‘ತೈಲ ಆಮದು: ಹೊಸ ತಂತ್ರಜ್ಞಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿದೇಶಗಳಿಂದ ತೈಲ ಆಮದು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೂತನ ಇಂಧನ ತಂತ್ರಜ್ಞಾನ ಅಭಿವೃದ್ದಿಪಡಿಸುತ್ತಿದೆ’ ಎಂದು ಮುಂಬೈನ ರಾಸಾಯನಿಕ ತಾಂತ್ರಿಕ ಸಂಸ್ಥೆಯ ಪ್ರಾಧ್ಯಾಪಕ ಜಿ.ಡಿ. ಯಾದವ್‌ ಹೇಳಿದರು. 

ನಗರದಲ್ಲಿ ಗುರುವಾರ ಕೇಂದ್ರೀಯ ವಿದ್ಯುತ್‌ ಸಂಶೋಧನಾ ಸಂಸ್ಥೆಯ (ಸಿಪಿಆರ್‌ಐ) ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೆಟ್ರೋಲ್‌, ಡೀಸೆಲ್‌ಗಿಂತ ನವೀಕರಿಸಹುದಾದ ಶಕ್ತಿ ಸಂಪನ್ಮೂಲಗಳ ಬಳಕೆಯ ಅಗತ್ಯತೆ ಹೆಚ್ಚಿದೆ’ ಎಂದರು. ‘2040ರ ವೇಳೆಗೆ ಜಲಜನಕದಿಂದ ಶುದ್ಧ ಇಂಧನವನ್ನು ಪಡೆಯಬಹುದಾಗಿದೆ. ಸೌರವಿದ್ಯುತ್‌ಗೆ ಪರ್ಯಾಯವಾಗಿ ಈ ಇಂಧನದಿಂದ ವಿದ್ಯುತ್‌ ಪಡೆಯುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದರು. 

ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್‌ ಲೋಬೋ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು