ಬೆಂಗಳೂರು: ಚಿಕ್ಕಜಾಲದ ಟೆಲಿಕಾಂ ಲೇಔಟ್ನ ಪಾರ್ಕಿಂಗ್ ಪ್ರದೇಶದಲ್ಲಿ ಸಿಕ್ಕಿದ ಮೃತದೇಹದ ಗುರುತನ್ನು ಚಿಕ್ಕಜಾಲ ಠಾಣೆ ಪೊಲೀಸರು ಪತ್ತೆ ಹಚ್ಚಿದ್ಧಾರೆ. ಆಕೆಯ ಪರಿಚಯಸ್ಥರೇ ಕೊಲೆ ಮಾಡಿ ಮೃತದೇಹ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆಯಾದ ಮಹಿಳೆಯನ್ನು ನೈಜೀರಿಯಾದ ಲೋವಿತಾ(31) ಎಂದು ಗುರುತಿಸಲಾಗಿದೆ.

ಲೋವಿತಾಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ದೇಹದ ವಿವಿಧೆಡೆ ಚಾಕುವಿನಿಂದ ಇರಿದಿರುವುದು ಪತ್ತೆಯಾಗಿತ್ತು. ಆಫ್ರಿಕನ್ ಅಸೋಸಿಯೇಷನ್ ಸದಸ್ಯರು ಕೃತ್ಯ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಆಕೆ ಲೋವಿತಾ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕೆಲವು ತಿಂಗಳ ಹಿಂದಷ್ಟೇ ಭಾರತಕ್ಕೆ ಬಂದಿದ್ದ ಲೋವಿತಾ, ಬನ್ನೇರುಘಟ್ಟ ಸಮೀಪದಲ್ಲಿ ವಾಸವಾಗಿದ್ದರು. ಆಕೆಯ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.