ಬೆಂಗಳೂರು: ನಗರದಲ್ಲಿ ಒಎಫ್‌ಸಿ ಕೇಬಲ್‌ಸಮಸ್ಯೆಯಿಂದಾಗಿ,ಸಾರ್ವಜನಿಕರು ಬೇಸತ್ತು ಹೋಗಿದ್ದು, ಸಂಬಂಧಿಸಿದ ಪ್ರಾಧಿಕಾರ ಹಾಗೂ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಬಹುತೇಕ ಭಾಗಗಳಲ್ಲಿ ಕೇಬಲ್ ಹಾಕಲು ರಸ್ತೆಯನ್ನು ಅಡ್ಡಾದಿಡ್ಡಿಯಾಗಿ ಅಗೆಯಲಾಗಿದೆ. ಪಾದಚಾರಿ ಮಾರ್ಗಗಳನ್ನು ಸಹ ಒಡೆದು ಹಾಕಲಾಗಿದೆ. ಆದ್ದರಿಂದ ವಾಹನ ಸಂಚಾರ ದುಸ್ತರವಾಗಿದೆ. ಇದಕ್ಕೆ ಕಾರಣವಾದ ಕಂಪನಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕು ಎಂದು ಬೆಳ್ಳಂದೂರು ಅಭಿವೃದ್ಧಿ ವೇದಿಕೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಳ್ಳಂದೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಒಎಫ್‌ಸಿ ಹಾಕಲಾಗುತ್ತಿದೆ. ಅವೈಜ್ಞಾನಿಕವಾಗಿ ರಸ್ತೆ ಅಗೆಯಲಾಗುತ್ತಿದೆ. ಅದಕ್ಕೆ ಕಾರಣವಾದ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದುಬೆಳ್ಳಂದೂರು ಅಭಿವೃದ್ಧಿ ವೇದಿಕೆ (ಬಿಡಿಎಫ್) ಸ್ಥಳೀಯ ಪೊಲೀಸ್ ಠಾಣೆಗೆದೂರು ನೀಡಿದೆ.

ನಗರದ ಸರ್ಜಾಪುರ ರಸ್ತೆ, ಕಸವನಹಳ್ಳಿ ಮುಖ್ಯ ರಸ್ತೆ, ಹರಳೂರು ರಸ್ತೆ, ದೊಡ್ಡಕನ್ನೇಹಳ್ಳಿ, ಕಾಡುಬೀಸನಹಳ್ಳಿ ರಸ್ತೆ, ಬೆಳ್ಳಂದೂರು ಮುಖ್ಯ ರಸ್ತೆ, ಕರಿಯಮ್ಮನ ಅಗ್ರಹಾರ ರಸ್ತೆಗಳಲ್ಲಿ ಇದರ ಹಾವಳಿ ಹೆಚ್ಚಾಗಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಇತರೆ ಭಾಗಗಳಲ್ಲಿಯೂ ಪರಿಸ್ಥಿತಿ ಇದೇ ರೀತಿ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಳ್ಳಂದೂರಿನಲ್ಲಿಅವೈಜ್ಞಾನಿಕ ಕೇಬಲ್‌ಗಳು ರಸ್ತೆಯ ಮೇಲ್ಮೈಯನ್ನು ಆವರಿಸಿಕೊಂಡಿವೆ. ಕೇಬಲ್ ಹಾಕುವವರು ಅಡ್ಡಾದಿಡ್ಡಿಯಾಗಿ ರಸ್ತೆ ಅಗೆದಿದ್ದಾರೆ. ಬಿಬಿಎಂಪಿಯು ಸಹ ಹಲವು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಸಂಚಾರ ದುಸ್ತರವಾಗಿದೆ. ರಸ್ತೆ ಅಗೆದವರವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂಘಟನೆಯ ಸದಸ್ಯರು ಮನವಿ ಮಾಡಿದ್ದಾರೆ.

ಕೂಡಲೇ ಸಂಬಂಧಿಸಿದ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನಾಗರಿಕರ ಸುರಕ್ಷತೆಗಾಗಿ ಸ್ಮಾರ್ಟ್ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಪೊಲೀಸರನ್ನು ಸಂಘಟನೆಯ ಸದಸ್ಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.