ಬುಧವಾರ, ಜನವರಿ 22, 2020
25 °C

ಈರುಳ್ಳಿ ಬೆಲೆ ದಿಢೀರ್‌ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈರುಳ್ಳಿ ದರ ದಿಢೀರನೆ ಕುಸಿತ ಕಂಡಿದ್ದು, ಕಳೆದ ವಾರ ಕೆ.ಜಿ ₹ 200ಕ್ಕೆ ತಲುಪಿದ್ದ ಅತ್ಯುತ್ತಮ ಗುಣಮಟ್ಟದ ಈರುಳ್ಳಿ ಧಾರಣೆ ಮಂಗಳವಾರ ₹ 100ಕ್ಕೆ ಇಳಿದಿದೆ.

ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಏರಿಕೆಯಾಗಿದೆ. ಈಜಿಪ್ಟ್‌, ಟರ್ಕಿ ದೇಶಗಳಿಂದ ಆಮದು ಮಾಡಿಕೊಂಡಿರುವ ಈರುಳ್ಳಿ ಜತೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಹೊಸಈರುಳ್ಳಿಯೂ ಬರುತ್ತಿದೆ. ಇದರಿಂದಾಗಿ ಬೇಡಿಕೆ ಕಡಿಮೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯ ದರ್ಶಿ ಸಿ. ಉದುಶಂಕರ್‌ ತಿಳಿಸಿದರು.

ಎಪಿಎಂಸಿಗೆ ಮಂಗಳವಾರ 60,000 ಚೀಲ ಈರುಳ್ಳಿ ಬಂದಿದೆ. ಉತ್ಕೃಷ್ಟ ಗುಣಮಟ್ಟದ ಈರುಳ್ಳಿ ಮಾತ್ರ ಕ್ವಿಂಟಲ್‌ಗೆ ₹ 800ಕ್ಕೆ ಮಾರಾಟವಾಗಿದೆ. ಸಾಮಾನ್ಯ ಗುಣಮಟ್ಟದ ಈರುಳ್ಳಿ ₹ 4,000ದಿಂದ ಬೇರೆ ಬೇರೆ ದರಗಳಿಗೆ ಹರಾಜಾಗಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು