ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ವಂಚನೆ: ₹1.3 ಲಕ್ಷ ಕಳೆದುಕೊಂಡ ಗೃಹಿಣಿ

Published 17 ಏಪ್ರಿಲ್ 2024, 14:32 IST
Last Updated 17 ಏಪ್ರಿಲ್ 2024, 14:32 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ವಂಚಕರು ಗೃಹಿಣಿಯೊಬ್ಬರಿಗೆ ₹1.3 ಲಕ್ಷ ವಂಚಿಸಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರಹಳ್ಳಿ ಮುಖ್ಯರಸ್ತೆಯ ಸುಂಕಲಪಾಳ್ಯದ ನಿವಾಸಿ ಆರ್.ಸುಕನ್ಯ ಅವರು ಹಣ ಕಳೆದುಕೊಂಡಿದ್ದು ದೂರು ನೀಡಿದ್ದಾರೆ.

‘ಮಾರ್ಚ್‌ 29ರಂದು ಮಧ್ಯಾಹ್ನ 12.45ರ ಸುಮಾರಿಗೆ ಎರಡು ಪ್ರತ್ಯೇಕ ನಂಬರ್‌ಗಳಿಂದ ತನ್ನ ಮೊಬೈಲ್‌ಗೆ ಲಿಂಕ್‌ವೊಂದು ಬಂದಿತ್ತು. ತನಗೆ ಅರಿವಿಲ್ಲದೇ ಆ ಲಿಂಕ್‌ ಒತ್ತಿದೆ. ಅದಾದ ಕೆಲವೇ ಕ್ಷಣಗಳಲ್ಲಿ ಸೆಂಟ್ರಲ್‌ ಬ್ಯಾಂಕ್ ಆಫ್‌ ಇಂಡಿಯಾ (ಫೋನ್‌ ಪೇ) ಹಾಗೂ ಎಸ್‌ಬಿಐನಿಂದ (ಫೋನ್‌ ಪೇ) ಪ್ರತ್ಯೇಕವಾಗಿ ₹13,001, ಆಕ್ಸಿಸ್ ಬ್ಯಾಂಕ್‌ ಕ್ರಿಡಿಟ್‌ ಕಾರ್ಡ್‌ನಿಂದ ₹ 41,180 ಹಾಗೂ ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ನಿಂದ ₹36,032 ಅನ್ನು ವಂಚಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT