ಮಂಗಳವಾರ, ಜನವರಿ 21, 2020
19 °C
19ರಂದು ಚಿನ್ನಸ್ವಾಮಿಯಲ್ಲಿ ಆಸ್ಟ್ರೇಲಿಯಾ–ಭಾರತ ಏಕದಿನ ಪಂದ್ಯ

ಆನ್‌ಲೈನ್ ಟಿಕೆಟ್‌ ಮಾರಾಟ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‌ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 19ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಪಂದ್ಯದ ಟಿಕೆಟ್‌ಗಳನ್ನು ಶನಿವಾರದಿಂದ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುವುದು.  https://www.ksca.cricket ವೆಬ್‌ಸೈಟ್ ಅಥವಾ ಪೇಟಿಎಂ (Paytm)ನಲ್ಲಿ ಟಿಕೆಟ್‌ಗಳು ಲಭ್ಯವಿದೆ. ಬೆಳಿಗ್ಗೆ ಹತ್ತರಿಂದ ಮಾರಾಟ ಆರಂಭವಾಗುವುದು.

ಪ್ರತಿಯೊಬ್ಬರಿಗೂ ತಲಾ ಎರಡು ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ₹ 4 ಸಾವಿರ ಮೌಲ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯ ಇವೆ. ಇಲ್ಲಿ ಮಾರಾಟವಾಗದ ಟಿಕೆಟ್‌ಗಳು ಕೌಂಟರ್‌ನಲ್ಲಿಯೂ ಸಿಗಲಿವೆ. ಜ. 13ರಿಂದ ಮೈದಾನದ ಕೌಂಟರ್‌ನಲ್ಲಿ ಟಿಕೆಟ್‌ ಮಾರಾಟ ನಡೆಯಲಿದೆ. ₹ 500, ₹ 2000 ಮತ್ತು ₹ 3000 ಮೌಲ್ಯದ ಟಿಕೆಟ್‌ಗಳು ಸಿಗಲಿವೆ ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು