ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಿಂದ ಆನ್‌ಲೈನ್‌ ತರಬೇತಿ ಕಾರ್ಯಕ್ರಮ

Last Updated 3 ಜೂನ್ 2022, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ತರಬೇತಿ ಘಟಕ ಹಾಗೂ ಹೈದರಾಬಾದ್‌ನ ಮ್ಯಾನೇಜ್‌ ಸಂಸ್ಥೆಯ ಆಶ್ರಯದಲ್ಲಿ ಜೂನ್‌ 14ರಿಂದ 16ರ ತನಕ ಕೃಷಿ ಮಾರುಕಟ್ಟೆ ಮಾಹಿತಿ ಕುರಿತು ಆನ್‌ಲೈನ್‌ ತರಬೇತಿ
ಹಮ್ಮಿಕೊಳ್ಳಲಾಗಿದೆ.

ಆಸಕ್ತ ಪ್ರಗತಿಪರ ರೈತರು, ವಿದ್ಯಾ ರ್ಥಿಗಳು, ಶಿಕ್ಷಕರು ಮತ್ತು ವಿಸ್ತರಣಾ ಕಾರ್ಯಕರ್ತರು, ಇದೇ 11ರ ಒಳಗೆ ‘ಮ್ಯಾನೇಜ್’ನ ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ತರಬೇತಿಯಲ್ಲಿ ಕೃಷಿ ಮಾರುಕಟ್ಟೆ ಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ನೀತಿಗಳು, ಪೂರೈಕೆ ಸರಪಳಿ, ಇ- ಟ್ರೇಡಿಂಗ್, ಇ-ನಾಮ್, ಕೃಷಿ ಪೋ ರ್ಟಲ್, ಕೃಷಿ ಉತ್ಪನ್ನಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ವಿಷಯ ಕುರಿತು ತಿಳಿಸಲಾಗುವುದು. ತರಬೇತಿಯಲ್ಲಿ ಭಾಗವಹಿಸಿದವರಿಗೆ ಡಿಜಿಟಲ್ ಪ್ರಮಾ ಣಪತ್ರ ನೀಡಲಾಗುವುದು. ಮಾಹಿತಿಗೆ ಸಿಬ್ಬಂದಿ ತರಬೇತಿ ಘಟಕದ ಸಂಯೋ ಜಕ ಡಾ.ಕೆ.ಶಿವರಾಮು ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT