ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ, ಅಂಕಗಳಿಲ್ಲದ ಶಾಲೆಯ ತೆರೆಯುವೆ: ರವಿ ಚನ್ನಣ್ಣನವರ್‌

Last Updated 15 ಡಿಸೆಂಬರ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಪರೀಕ್ಷೆಗಳಿಲ್ಲದ, ಅಂಕ ಮತ್ತು ರ‍್ಯಾಂಕ್‌ಗಳಿಲ್ಲದ ಶಾಲೆಗಳನ್ನು ತೆರೆಯುವ ಕನಸಿದೆ’ ಎಂದುಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.

ಟೀಮ್ ಶಿಕ್ಷಣ್ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಶಿಕ್ಷಣ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿತ್ಯ 25 ಲಕ್ಷ ಮಕ್ಕಳಿಗೆ ಆಹಾರ ಸಿಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿಮಕ್ಕಳು ಬೆಳೆಯುತ್ತಿದ್ದಾರೆ. ಯಾರು ಹಸಿವು ಅನುಭವಿಸುತ್ತಾರೋ ಹಾಗೂ ಸಮಸ್ಯೆಗಳನ್ನು ಅರಿಯುತ್ತಾರೋ, ಅವರಲ್ಲಿ ಸಾಧನೆ ಮಾಡಲು ಬಲವಾದ ಕಾರಣ ಮೂಡುತ್ತದೆ.ಯಾವುದೇ ವ್ಯವಸ್ಥೆ ಕೆಟ್ಟರೂ ಅದರಿಂದ ಸಮಾಜಕ್ಕೆ ನಷ್ಟ ಆಗುವುದಿಲ್ಲ. ಆದರೆ, ಶಿಕ್ಷಕರು ಸರಿಯಾಗಿ ಬೋಧನೆ ಮಾಡದಿದ್ದರೆ ಇಡೀ ಸಮಾಜ ದಿಕ್ಕು ತಪ್ಪುತ್ತದೆ’ ಎಂದರು.

ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿರುವ ಅಣ್ಣಾಮಲೈ, ‘ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿ
ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ, ವಿದ್ಯಾರ್ಥಿಗಳ ನಂಬಿಕೆ ಮತ್ತು ಆತ್ಮವಿಶ್ವಾಸದಲ್ಲಿ ವ್ಯತ್ಯಾಸ ಇದೆ. ಪ್ರತಿ ವಿದ್ಯಾರ್ಥಿಯೂ ಸ್ವಯಂ ವಿಶ್ವಾಸ ಹೊಂದಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT