ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ನರಸೀಪುರ ತೋಪಿನಲ್ಲಿ ನಿರ್ಮಾಣ ಮಾಡುತ್ತಿರುವ ಹಾಲು ಶಿತಲೀಕರಣ ಘಟಕ (ಬಿಎಂಸಿ) ಕಟ್ಟಡದ ಸಂಪ್ಗಳು ಬಾಯ್ತೆರೆದು ನಿಂತಿದ್ದು, ಅಪಾಯ ಆಹ್ವಾನಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಲವು ತಿಂಗಳಿಂದ ಎರಡು ಸಂಪುಗಳನ್ನು ಹೀಗೆಯೇ ಬಾಯ್ತೆರೆದು ಬಿಡಲಾಗಿದೆ. ಸಿಮೆಂಟ್ ಸಂಪ್ಗಳು ಇವಾಗಿದ್ದು, ನೀರು ಪಾಚಿ ಕಟ್ಟಿದೆ. ಅಕಸ್ಮಾತ್ ಯಾರಾದರೂ ಬಿದ್ದರೆ ಅನಾಹುತ ಸಂಭವಿಸುತ್ತದೆ ಎನ್ನುತ್ತಾರೆ ಸ್ಥಳೀಯರು.

’ಸ್ಥಳೀಯ ಆಡಳಿತವಾದ ಪಂಚಾಯಿತಿ ಕಚೇರಿ ಹಿಂಭಾಗದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿಯೇ ಅಂಚೆ ಕಚೇರಿ ಇದ್ದು, ವೃದ್ಧರು, ಅಂಗವಿಕಲರು, ವಿಧವೆಯರು ತಮ್ಮ ಮಾಸಾಶನ ಪಡೆಯುವುದಕ್ಕೆ ಬರುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಂಡಿತ’ ಅನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾರುತಿ.

ಜನದಟ್ಟಣೆಯ ಪ್ರದೇಶದಲ್ಲಿ ಅನಾಹುತಕ್ಕೆ ಕಾರಣವಾಗುವ ಸಂಪ್ಗಳ ಬಾಯಿ ಮುಚ್ಚಲು ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.