ಬೆಂಗಳೂರು: ಮಿದುಳು ನಿಷ್ಕ್ರೀಯವಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂಗಾಗಗಳನ್ನು ಕುಟುಂಬಸ್ಥರು ದಾನ ಮಾಡಿರುವ ಘಟನೆಯು ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಜರುಗಿದೆ.

ನ.29ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟೇಶ್ ಕೆ.(46) ಎನ್ನುವವರಿಗೆ ಮಿದುಳು ನಿಷ್ಕ್ರೀಯವಾಗಿತ್ತು. ಚಿಕಿತ್ಸೆಗಾಗಿ ಯಶವಂತಪುರದಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಗುಣಮುಖರಾಗುವ ಲಕ್ಷಣ ಕಂಡುಬಂದಿರಲಿಲ್ಲ.

ವೆಂಕಟೇಶ್ ಅವರಿಗೆ ಡಿ.1ರಂದು ಸಂಪೂರ್ಣ ಮಿದುಳು ನಿಷ್ಕ್ರೀಯವಾಗಿತ್ತು ಎಂದು ಅವರಿಗೆ ಚಿಕಿತ್ಸೆ ನೀಡುತಿದ್ದ ವೈದ್ಯರು ಮಾಹಿತಿ ನೀಡಿದ್ದಾರೆ.

ಆಘಾತದ ನಡುವೆಯೂ ಅವರ ಮೃತರ ಕುಟುಂಬದವರು ಅಂಗಾಗ ದಾನ ಮಾಡಲು ಬಯಸಿದ್ದರು. ಅವರ ಯಕೃತ್ತು, ಮೂತ್ರಪಿಂಡ, ಕಣ್ಣು, ಶ್ವಾಸಕೋಶ ಹಾಗೂ ಹೃದಯ ಕವಾಟಗಳನ್ನು ದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವೆಂಕಟೇಶ್ ಅವರು ಕಷ್ಟ ಜೀವಿಯಾಗಿದ್ದರು. ಅವರ ಅಂಗಾಗಗಳನ್ನು ದಾನ ಮಾಡುವ ಮೂಲಕ ಅವರ ಸಾವಿಗೆ ಗೌರವ ಸೂಚಿಸಿದ್ದೇವೆ. ಅಂಗಾಗ ದಾನದ ಮೂಲಕ ಅವರು ಇನ್ನೂ ನಮ್ಮ ಜೊತೆಗಿದ್ದಾರೆ ಎಂದು ಅನಿಸುತ್ತಿದೆ ಎಂದು ಅವರ ಸಹೋದರಿ ಹೇಳಿದ್ದಾರೆ.